ವಿಧಾನಸೌಧಕ್ಕೆ ಬಾರದ ದೇವೇಗೌಡ

7

ವಿಧಾನಸೌಧಕ್ಕೆ ಬಾರದ ದೇವೇಗೌಡ

Published:
Updated:
ವಿಧಾನಸೌಧಕ್ಕೆ ಬಾರದ ದೇವೇಗೌಡ

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಪುತ್ರ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಕ್ಷಣವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಟಿ.ವಿ.ಯಲ್ಲೇ ವೀಕ್ಷಿಸಿದರು.

ಬಿಜೆಪಿಗೆ ಬಹುಮತ ಇಲ್ಲದಿದ್ದರೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಸರ್ಕಾರ ರಚಿಸಲು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದ್ದನ್ನು ಖಂಡಿಸಲು, ಕಳೆದ ಶನಿವಾರ ಕಾಂಗ್ರೆಸ್‌–ಜೆಡಿಎಸ್‌ ಜಂಟಿಯಾಗಿ ನಡೆಸಿದ್ದ ಪ್ರತಿಭಟನೆಯಲ್ಲಿ ದೇವೇಗೌಡರು ಉತ್ಸಾಹದಿಂದ ಭಾಗವಹಿಸಿದ್ದರು. ಅವರು ಶುಕ್ರವಾರ ವಿಧಾನಸೌಧಕ್ಕೆ ಭೇಟಿ ನೀಡಬಹುದು ಎಂಬ ನಿರೀಕ್ಷೆಯನ್ನು ಪಕ್ಷದ ಕೆಲವು ಮುಖಂಡರು ಹೊಂದಿದ್ದರು.

ಕಾಂಗ್ರೆಸ್‌ ಪಕ್ಷದ ಪ್ರಮುಖರೆಲ್ಲ ವಿಧಾನಸೌಧಕ್ಕೆ ಬಂದಿದ್ದರೂ ದೇವೇಗೌಡರು ಮಾತ್ರ ಅತ್ತ ತಲೆ ಹಾಕಲಿಲ್ಲ. ಅದರ ಬದಲು, ಪದ್ಮನಾಭ ನಗರದ ಮನೆಯಲ್ಲೇ ಕುಳಿತು ದಿನದ ಬೆಳವಣಿಗೆಗಳ ವಿವರ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry