ಸ್ಟೆರಲೈಟ್‌ ಕಾರ್ಖಾನೆ ಮುಚ್ಚುವಂತೆ ಧ್ವನಿಯೆತ್ತಿದ ತಮಿಳುನಾಡಿನ ಹಳ್ಳಿಗರು

7

ಸ್ಟೆರಲೈಟ್‌ ಕಾರ್ಖಾನೆ ಮುಚ್ಚುವಂತೆ ಧ್ವನಿಯೆತ್ತಿದ ತಮಿಳುನಾಡಿನ ಹಳ್ಳಿಗರು

Published:
Updated:
ಸ್ಟೆರಲೈಟ್‌ ಕಾರ್ಖಾನೆ ಮುಚ್ಚುವಂತೆ ಧ್ವನಿಯೆತ್ತಿದ ತಮಿಳುನಾಡಿನ ಹಳ್ಳಿಗರು

ತೂತ್ತುಕುಡಿ(ತಮಿಳುನಾಡು): ತೂತ್ತುಕುಡಿಯಲ್ಲಿರುವ ಸ್ಟೆರಲೈಟ್‌ ತಾಮ್ರ ಸಂಸ್ಕರಣಾ ಘಟಕವನ್ನು ತಕ್ಷಣ ಮುಚ್ಚುವಂತೆ ಇಲ್ಲಿನ ಕುಮರೆಡ್ಡಿಯಾಪುರ ಮತ್ತು ಮಿಲವಿತ್ತನ್‌ ಗ್ರಾಮದ ನಿವಾಸಿಗಳು ಧ್ವನಿಯೆತ್ತಿದ್ದಾರೆ.

‘ಇಲ್ಲಿ ಕಾರ್ಖಾನೆಗಳು ಆರಂಭವಾದಾಗಿನಿಂದ ಸುತ್ತಲಿನ ಊರುಗಳ ಜಲಮೂಲಗಳು ಕಲುಷಿತಗೊಂಡಿದೆ. ನಾವು ಮಾಲಿನ್ಯಯುಕ್ತ ನೀರನ್ನೇ ಬಳಸುವಂತಾಗಿದೆ. ಸ್ಟೆರಲೈಟ್‌ ಘಟಕವನ್ನು ಸಂಪೂರ್ಣವಾಗಿ ಬಂದ್‌ ಮಾಡುವಂತೆ ಹಲವಾರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಆದರೆ, ಅಧಿಕಾರಿಗಳು ಮಾತ್ರ ನಮ್ಮ ಮನವಿಗೆ ಕಿವಿಗೊಡುತ್ತಿಲ್ಲ’ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಈ ಹಳ್ಳಿಗಳಲ್ಲಿನ ಕಲುಷಿತ ನೀರಿನ ಕುರಿತು ನಿರ್ದಿಷ್ಟವಾಗಿ ಏನನ್ನೂ ಹೇಳಲಾರೆ. ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಸಮಸ್ಯೆ ಇದ್ದರೆ ಪರಿಹರಿಸುತ್ತೇವೆ’ ಎಂದು ತೂತ್ತುಕುಡಿಯ ಜಿಲ್ಲಾಧಿಕಾರಿ ಸಂದೀಪ್‌ ನಂದುರಿ ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry