‘ಅಗತ್ಯವಿದ್ದಾಗ ಪಾಕಿಸ್ತಾನವನ್ನು ಬಳಸಿಕೊಂಡು ಬೇಡವೆಂದಾಗ ದೂರ ತಳ್ಳುವ ಅಮೆರಿಕ’

7

‘ಅಗತ್ಯವಿದ್ದಾಗ ಪಾಕಿಸ್ತಾನವನ್ನು ಬಳಸಿಕೊಂಡು ಬೇಡವೆಂದಾಗ ದೂರ ತಳ್ಳುವ ಅಮೆರಿಕ’

Published:
Updated:
‘ಅಗತ್ಯವಿದ್ದಾಗ ಪಾಕಿಸ್ತಾನವನ್ನು ಬಳಸಿಕೊಂಡು ಬೇಡವೆಂದಾಗ ದೂರ ತಳ್ಳುವ ಅಮೆರಿಕ’

ಇಸ್ಲಾಮಾಬಾದ್‌: ‘ಪಾಕಿಸ್ತಾನವನ್ನು ಅಗತ್ಯ ಇದ್ದಾಗ ಬಳಸಿಕೊಳ್ಳುವ ಅಮೆರಿಕ, ಬೇಡವೆಂದಾಗ ದೂರ ತಳ್ಳುತ್ತಿದೆ’ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಆರೋಪಿಸಿದ್ದಾರೆ.

‘ಭಾರತದ ಜೊತೆ ಸೇರಿ ಪಾಕ್ ವಿರುದ್ಧ ಅಮೆರಿಕ ಒಗ್ಗೂಡುತ್ತಿರುವುದೇ ಇದಕ್ಕೆ ಕಾರಣ’ ಎಂದು ಅವರು ‘ವಾಯ್ಸ್ ಆಫ್ ಅಮೆರಿಕ’ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ನಡುವಣ ಶೀತಲ ಸಮರದ ಸಂದರ್ಭದಲ್ಲಿ ಭಾರತವನ್ನು ಅಮೆರಿಕ ಬಹಿರಂಗವಾಗಿಯೇ ಬೆಂಬಲಿಸಿದೆ. ಇದರ ಪರಿಣಾಮ ನೇರವಾಗಿ ಪಾಕಿಸ್ತಾನದ ಮೇಲೆ ಉಂಟಾಗುತ್ತಿದೆ. ಅಫ್ಗಾನಿಸ್ತಾನದಲ್ಲಿ ಭಾರತದ ಪಾತ್ರದ ಬಗ್ಗೆ ವಿಶ್ವಸಂಸ್ಥೆ ಪರಿಶೀಲನೆ ನಡೆಸಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದು ಅವರು ಹೇಳಿದ್ದಾರೆ.

ಪಾಕ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ಳು ಮತ್ತು ವಂಚನೆಯ ಆರೋಪ ಹೊರಿಸುತ್ತಿದ್ದಾರೆ. ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವಣ ಸಂಬಂಧ ಹದಗೆಡಲು ಇದು ಕೂಡ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry