ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು

7
ಶಾಲೆಯ ಪ್ರಾರಂಭದ ದಿನವೇ ಪಠ‍್ಯಪುಸ್ತಕ ವಿತರಿಸಲು ನಿರ್ಧಾರ

ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು

Published:
Updated:
ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು

ಚಿಕ್ಕೋಡಿ: ರಜೆ ಮುಗಿಸಿ ಮರಳಿ ಶಾಲೆಗೆ ತೆರಳಲು ಮಕ್ಕಳು ಸಜ್ಜಾಗುತ್ತಿದ್ದಾರೆ. ಶಾಲೆಯ ಪ್ರಾರಂಭದ ದಿನವೇ ವಿದ್ಯಾರ್ಥಿಗಳಿಗೆ ಪಠ‍್ಯಪುಸ್ತಕ ವಿತರಿಸಲು ಶಿಕ್ಷಣ ಇಲಾಖೆಯೂ ಸಜ್ಜಾಗಿ, ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡುತ್ತಿದೆ.

ಈಗಾಗಲೇ ಚಿಕ್ಕೋಡಿಯಲ್ಲಿ ಪ್ರತಿಶತ 51.33 ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಕಳುಹಿಸಲಾಗಿದೆ. ಪ್ರಸಕ್ತ ವರ್ಷ ಶಾಲೆ ಪ್ರಾರಂಭಕ್ಕೂ ಮುನ್ನವೇ ಆಯಾ ವಲಯಗಳ ಮೂಲಕ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ.

ಜಿಲ್ಲೆ ವ್ಯಾಪ್ತಿಯ ಎಂಟೂ ವಲಯಗಳಲ್ಲಿ ಪ್ರಸಕ್ತ ವರ್ಷ 24,99,707 ಉಚಿತ ಪಠ‍್ಯಪುಸ್ತಕ ಹಂಚಿಕೆ ಹಾಗೂ 7,45,150 ಮಾರಾಟ ಮಾಡುವ ಪಠ್ಯಪುಸ್ತಕ ಸೇರಿದಂತೆ ಒಟ್ಟು 32,44,857 ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿತ್ತು. ಆ ಪೈಕಿ ಸದ್ಯ 12,63,867 ಉಚಿತ ವಿತರಣೆ ಪಠ‍್ಯಪುಸ್ತಕಗಳು ಹಾಗೂ  4,01,962 ಮಾರಾಟ ಪಠ್ಯಪುಸ್ತಕ ಸೇರಿದಂತೆ ಒಟ್ಟು 16,65,829 ಪಠ್ಯಪುಸ್ತಕಗಳ ಸರಬರಾಜು ಆಗಿದ್ದು, ಶಾಲೆಗಳಿಗೆ ರವಾನಿಸಲಾಗುತ್ತಿದೆ.

‘ಹಂತ ಹಂತವಾಗಿ ಪಠ್ಯಪುಸ್ತಕಗಳ ಸರಬರಾಜು ಆಗುತ್ತಿವೆ. ಶೀಘ್ರದಲ್ಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದಾಸರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry