ಸಂದೀಪ್ ಸಿಂಗ್ ಪ್ರತಿಮೆ ಸ್ಥಾಪನೆಗೆ ನಿರ್ಧಾರ

7

ಸಂದೀಪ್ ಸಿಂಗ್ ಪ್ರತಿಮೆ ಸ್ಥಾಪನೆಗೆ ನಿರ್ಧಾರ

Published:
Updated:
ಸಂದೀಪ್ ಸಿಂಗ್ ಪ್ರತಿಮೆ ಸ್ಥಾಪನೆಗೆ ನಿರ್ಧಾರ

ಜೈಪುರ: ಭಾರತ ಹಾಕಿ ತಂಡದ ನಾಯಕರಾಗಿದ್ದ ಸಂದೀಪ್ ಸಿಂಗ್ ಅವರ ಪ್ರತಿಮೆಯನ್ನು ಇಲ್ಲಿನ ಮೇಣದ ವಸ್ತು ಸಂಗ್ರಹಾಲಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಮೂಲಕ ಅವರು ಪ್ರತಿಷ್ಠಿತರ ಸಾಲಿಗೆ ಸೇರಲಿದ್ದಾರೆ. ಮಹಾತ್ಮ ಗಾಂಧೀಜಿ, ಮಹಾರಾಣ ಪ್ರತಾಪ್‌, ಸುಭಾಷ್ ಚಂದ್ರ ಬೋಸ್‌, ಭಗತ್ ಸಿಂಗ್‌, ಮದರ್ ತೆರೇಸಾ, ಅಮಿತಾಭ್ ಬಚ್ಚನ್‌, ಸಚಿನ್ ತೆಂಡೂಲ್ಕರ್‌ ಮುಂತಾದವರ ಪ್ರತಿಮೆಯನ್ನು ಈಗಾಗಲೇ ಇಲ್ಲಿ ಸ್ಥಾಪಿಸಲಾಗಿದೆ.

‘ಇದು ನನಗೆ ಲಭಿಸಿದ ದೊಡ್ಡ ಗೌರವ. ಈ ತೀರ್ಮಾನ ಕೈಗೊಂಡವರಿಗೆ ನಾನು ಕೃತಜ್ಞನಾಗಿದ್ದೇನೆ. ಮುಂದಿನ ತಿಂಗಳು ಪ್ರತಿಮೆ ಅನಾವರಣಗೊಳ್ಳುವ ಸಾಧ್ಯತೆ ಇದೆ. ಜುಲೈ 13ರಂದು ನನ್ನ ಜೀವನ ಚರಿತ್ರೆ ಆಧಾರಿತ ಚಿತ್ರ ಬಿಡುಗಡೆಯಾಗಲಿದೆ’ ಎಂದು ಸಂದೀಪ್‌ ಸುದ್ದಿಸಂಸ್ಥೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry