ಲತಾ ಮಂಗೇಶ್ಕರ್ ಜೊತೆ ಐಪಿಎಲ್ ಫೈನಲ್ ವೀಕ್ಷಿಸಿದ ಸಚಿನ್ ದಂಪತಿ

7

ಲತಾ ಮಂಗೇಶ್ಕರ್ ಜೊತೆ ಐಪಿಎಲ್ ಫೈನಲ್ ವೀಕ್ಷಿಸಿದ ಸಚಿನ್ ದಂಪತಿ

Published:
Updated:
ಲತಾ ಮಂಗೇಶ್ಕರ್ ಜೊತೆ ಐಪಿಎಲ್ ಫೈನಲ್ ವೀಕ್ಷಿಸಿದ ಸಚಿನ್ ದಂಪತಿ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ನಡುವಣ  ನಡೆದಿದ್ದ ಐಪಿಎಲ್ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯವನ್ನು ನೋಡಲು ಸಚಿನ್ ತೆಂಡೂಲ್ಕರ್ ಬಂದಿರಲಿಲ್ಲ. ಆದರೆ ಅವರು  ಪಂದ್ಯವನ್ನು ಎಲ್ಲಿ ವೀಕ್ಷಿಸಿದರು ಮತ್ತು ತಮ್ಮ ‘ತವರಿನಅಂಗಳ’ ವಾಂಖೆಡೆ ಕ್ರೀಡಾಂಗಣಕ್ಕೆ ಬರದಿರುವ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಅವರು ಆ ದಿನ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಮನೆಯಲ್ಲಿ ತಮ್ಮ ಪತ್ನಿ ಅಂಜಲಿ ಅವರೊಂದಿಗೆ ಪಂದ್ಯವನ್ನು ವೀಕ್ಷಿಸಿದ್ದರು.

‘ಆಮೋಘವಾದ ಐಪಿಎಲ್ ಫೈನಲ್ ಪಂದ್ಯವನ್ನು ಲತಾ ಮಂಗೇಶ್ಕರ್ ದೀದಿಯೊಂದಿಗೆ ಅವರ ಮನೆಯಲ್ಲಿ ವೀಕ್ಷಿಸಿದ್ದು ಅವಿಸ್ಮರಣೀಯ’ ಎಂದು  ಸಚಿನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅದರೊಂದಿಗೆ ಲತಾ ಮಂಗೇಶ್ಕರ್ ಮತ್ತು ಅಂಜಲಿ ಅವರೊಂದಿಗೆ ಇರುವ ಚಿತ್ರವನ್ನೂ ಪೋಸ್ಟ್‌ ಮಾಡಿದ್ದಾರೆ.

ವಾಂಖೆಡೆ ಕ್ರೀಡಾಂಗಣವು ಮುಂಬೈ ಇಂಡಿಯನ್ಸ್‌ ತಂಡದ ತವರು ಕ್ರೀಡಾಂಗಣವಾಗಿದೆ. ಸಚಿನ್ ಅವರು ಮುಂಬೈ ತಂಡದ ಸಲಹೆಗಾರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry