ಬುಧವಾರ, ಡಿಸೆಂಬರ್ 11, 2019
20 °C

ಉದಯ ಹೊಳ್ಳ ನೂತನ ಎ.ಜಿ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದಯ ಹೊಳ್ಳ ನೂತನ ಎ.ಜಿ ?

ಬೆಂಗಳೂರು: ಹೈಕೋರ್ಟ್‌ನ ಹೊಸ ಅಡ್ವೊಕೇಟ್‌ (ಎ.ಜಿ) ಜನರಲ್ ಆಗಿ ಹಿರಿಯ ವಕೀಲ ಉದಯ ಹೊಳ್ಳ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉದಯ ಹೊಳ್ಳ, ‘ಸರ್ಕಾರದ ಅಧಿಕೃತ ಆದೇಶ ಇನ್ನೂ ನನ್ನ ಕೈಸೇರಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೊಳ್ಳ ಅವರು ನಾಲ್ಕನೇ ಬಾರಿಗೆ ಅಡ್ವೊಕೇಟ್‌ ಜನರಲ್‌ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ಒಂದು ಬಾರಿ ಮತ್ತು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಎರಡು ಬಾರಿ ಅಡ್ವೊಕೇಟ್‌ ಜನರಲ್‌ ಆಗಿದ್ದರು.

ಪ್ರತಿಕ್ರಿಯಿಸಿ (+)