ಭಾನುವಾರ, ಮಾರ್ಚ್ 29, 2020
19 °C

ಇನ್‌ಸ್ಟಾಗ್ರಾಂನಲ್ಲಿ ಬ್ಯುಸಿನೆಸ್ ಪ್ರೊಫೈಲ್ ಸೇರಿಸುವುದು ಹೇಗೆ?

ರಶ್ಮಿ ಕಾಸರಗೋಡು Updated:

ಅಕ್ಷರ ಗಾತ್ರ : | |

ಇನ್‌ಸ್ಟಾಗ್ರಾಂನಲ್ಲಿ ಬ್ಯುಸಿನೆಸ್ ಪ್ರೊಫೈಲ್ ಸೇರಿಸುವುದು ಹೇಗೆ?

ಫೇಸ್‌ಬುಕ್ಕಿನಲ್ಲಿ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡಿದಂತೆ ಇನ್‌ಸ್ಟಾಗ್ರಾಂನಲ್ಲಿಯೂ ತಮ್ಮ ವ್ಯಾಪಾರಗಳಿಗೆ ಅನುಕೂಲವಾಗುವಂತೆ ಬ್ಯುಸಿನೆಸ್ ಪ್ರೊಫೈಲ್ ಕ್ರಿಯೇಟ್ ಮಾಡಬಹುದು.

ಏನು ಮಾಡಬೇಕು?

* ಮೊದಲು ಬ್ಯುಸಿನೆಸ್‌ಗಾಗಿರುವ ಫೇಸ್‌ಬುಕ್‌ ಪೇಜ್ ಕ್ರಿಯೇಟ್ ಮಾಡಿ. ಆನಂತರ ಇನ್‌ಸ್ಟಾಗ್ರಾಂಗೆ ಲಾಗಿನ್ ಆಗಿ ಪ್ರೊಫೈಲ್‌ನಲ್ಲಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ

* ಅಲ್ಲಿ Switch to business account ಕ್ಲಿಕ್ ಮಾಡಿ.

* Continue ಬಟನ್ ಕ್ಲಿಕ್ ಮಾಡುತ್ತಾ ಹೋಗಿ. ಕೊನೆಗೆ connect to facebook ಎಂದು ಕಾಣಿಸುತ್ತದೆ. ಅದರ ಕೆಳಗೆ choose page ಕ್ಲಿಕ್ ಮಾಡಿದರೆ ನೀವು ಈಗಾಗಲೇ ಕ್ರಿಯೇಟ್ ಮಾಡಿರುವ ಫೇಸ್‌ಬುಕ್‌ ಪೇಜ್‌ಗೆ ಲಿಂಕ್ ಆಗುತ್ತದೆ. ಆನಂತರ ನಿಮ್ಮ ಬ್ಯುಸಿನೆಸ್ ಪೇಜ್‌ನಲ್ಲಿ ಬೇರೆ ಮಾಹಿತಿಗಳನ್ನು ಸೇರಿಸಬೇಕಿದ್ದರೆ, ಬದಲಾವಣೆ ಮಾಡಬೇಕಿದ್ದರೆ ಮಾಡಬಹುದು.

* ಇನ್‌ಸ್ಟಾಗ್ರಾಂನೊಂದಿಗೆ ಲಿಂಕ್ ಆಗಿರುವ ಫೇಸ್‌ಬುಕ್‌ ಪೇಜ್‌ನಿಂದಲೇ ಎಲ್ಲ ಮಾಹಿತಿಗಳು ಇನ್‌ಸ್ಟಾಗ್ರಾಂ ಬ್ಯುಸಿನೆಸ್ ಪೇಜ್‌ಗೆ  ಇಂಪೋರ್ಟ್ ಆಗಿ ಬಿಡುತ್ತವೆ.

ಇದೆಲ್ಲ ಮಾಡಿ ಮುಗಿಸಿದ ನಂತರ Done ಕ್ಲಿಕ್ ಮಾಡಿದರೆ ಇನ್‌ಸ್ಟಾಗ್ರಾಂ ಖಾತೆ ಬ್ಯುಸಿನೆಸ್ ಖಾತೆಯಾಗಿ ಬದಲಾಗುತ್ತದೆ.

ಬ್ಯುಸಿನೆಸ್ ಪ್ರಚಾರ ಹೇಗೆ?

* ನಿಮ್ಮ ಖಾತೆಗೆ ಲಾಗಿನ್ ಆಗಿ ಅಲ್ಲಿ ಇನ್‌ಸೈಟ್‌ ಪ್ಯಾನಲ್ ತೆರೆಯಿರಿ

* ಇನ್‌ಸೈಟ್‌ ಸ್ಕ್ರೀನ್‌ನಲ್ಲಿ ಸ್ಕ್ರಾಲ್ ಮಾಡಿದಾಗ ಕ್ರಿಯೇಟ್ ಪ್ರೊಮೋಷನ್ ಎಂಬ ಆಯ್ಕೆ ಕಾಣಿಸುತ್ತದೆ.

* Create a new promotion ಕ್ಲಿಕ್ ಮಾಡಿ ನಿಮ್ಮ ಬ್ಯುಸಿನೆಸ್ ಪೋಸ್ಟ್ ಪ್ರಚಾರ ಮಾಡಿ. ಇದಕ್ಕಾಗಿ ದುಡ್ಡು ಪಾವತಿ ಮಾಡಬೇಕಾಗುತ್ತದೆ.

* ನೀವು ಪ್ರಚಾರ ಮಾಡಲು ಉದ್ದೇಶಿಸಿರುವ ಪೋಸ್ಟ್ ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ್ದೇ ಆಗಿರಬೇಕು

* ನಿಮ್ಮ ಗ್ರಾಹಕರು ನಿಮ್ಮನ್ನು ಹೇಗೆ ಸಂಪರ್ಕಿಸಬೇಕೆಂಬ ಮಾಹಿತಿಯನ್ನೂ ಇಲ್ಲಿ ನೀಡಬೇಕು.

* ನಿಮ್ಮ ಗ್ರಾಹಕರು ಯಾರು ಎಂಬುದನ್ನು ನೀವೇ ನಿರ್ಧರಿಸಿ, ಅವರಿಗೆ ಸುಲಭವಾಗಿ ತಲುಪುವ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಿ.

* ನಿಮ್ಮ ಪ್ರೊಮೋಷನ್ ಅಥವಾ ಪ್ರಚಾರಕ್ಕಾಗಿ ಎಷ್ಟು ಹಣ ಪಾವತಿ ಮಾಡಬೇಕೆಂಬುದನ್ನು budget ಸೆಟ್ಟಿಂಗ್  ನಲ್ಲಿ ಮಾಡಿಕೊಳ್ಳಬಹುದು. ಇಂತಿಷ್ಟು ಹಣ ಪಾವತಿ ಮಾಡಿದರೆ ಎಷ್ಟು ಪ್ರಚಾರ ಸಿಗುತ್ತದೆ ಎಂಬ ಮಾಹಿತಿ ಅಲ್ಲಿ ಸಿಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿರುವ ಬಜೆಟ್‍ನ್ನು ನೀವು ಆಯ್ಕೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)