ಇಳಿದ ದರ; ಮಾವು ಬೆಳೆಗಾರ ತತ್ತರq

7

ಇಳಿದ ದರ; ಮಾವು ಬೆಳೆಗಾರ ತತ್ತರq

Published:
Updated:
ಇಳಿದ ದರ; ಮಾವು ಬೆಳೆಗಾರ ತತ್ತರq

ಹಳಿಯಾಳ: ಮಾವಿನ ಹಣ್ಣಿನ ದರ ಭಾರಿ  ಇಳಿಮುಖ ಕಂಡಿದೆ. ಮೇ ತಿಂಗಳ ಎರಡನೇ ವಾರದಿಂದ ಮಾವಿನ ಹಣ್ಣುಗಳು ಮಾರಾಟಕ್ಕೆ ಬರುವುದು ಸಹಜ. ಆದರೆ ಈ ಬಾರಿ ಏಪ್ರಿಲ್‌ ಕೊನೆ ವಾರದಲ್ಲಿ ಅಡ್ಡ ಗಾಳಿ, ಮಳೆ ಬಿದ್ದ ಪರಿಣಾಮ ಮೇ ಮೊದಲ ವಾರವೇ ಹಣ್ಣು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತು.

ಹಳಿಯಾಳ ತಾಲ್ಲೂಕಿನ ಆಪೂಸ್‌ಗೆ ಮೊದಲಿನಿಂದಲೂ ಬೇಡಿಕೆ ಇದೆ. ಆದರೆ ಈ ಬಾರಿ ಡಜನ್‌ ₹ 100ಕ್ಕೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅದು  ₹4 250-350 ಇತ್ತು. ಇದಲ್ಲದೇ ನೀಲಂ, ಕಲ್ಮಿ, ಪೈರಿ, ತೋತಾಪುರಿ, ಮಲಗೋವಾ, ರಸಪುರಿ, ದಸೇರಿ, ಬೇನಿಸಾ, ಸಣ್ಣೆಲೆ, ಮಾರಕುರ್ ಹೆಣ್ಣಿಗೆ ಮಾರುಕಟ್ಟೆಯಲ್ಲಿ ಡಜನ್‌ಗೆ ₹ 50ರಿಂದ 80ರ ದರವಿದೆ.

1977ರಿಂದ ಹಳಿಯಾಳಕ್ಕೆ ಮುಂಬೈ, ಅಹಮದಾಬಾದ್‌, ಪುಣೆ, ಗೋವಾ, ಮಂಗಳೂರು, ಬೆಂಗಳೂರು ಕಡೆಯಿಂದ ಮಾವು ಖರೀದಿಸಲು ಬರುತ್ತಿದ್ದಾರೆ. ಇಲ್ಲಿನ ಎಪಿಎಂಸಿ ಸಹ ವಹಿವಾಟಕ್ಕೆ ಹೆಸರುವಾಸಿಯಾಗಿದೆ. ಇಲ್ಲಿತನಕ ಅಂದಾಜು 18 ಸಾವಿರ ಕ್ವಿಂಟಲ್‌ ಹಣ್ಣು ಮಾರಾಟವಾಗಿದೆ. ಆರಂಭದಲ್ಲಿ ಕ್ವಿಂಟಲ್‌ಗೆ ದರ ₹ 2,400 ಇದ್ದದ್ದು ಈಗ ₹ 1400ಕ್ಕೆ ಇಳಿಕೆ ಕಂಡಿದೆ.

ವ್ಯಾಪಾರದ ಕುರಿತು ಅಳಲು ತೋಡಿಕೊಂಡ ತತ್ವಣಗಿ ಗ್ರಾಮಸ್ಥ ಮಹಾಂತೇಶ ಗೋವಿಂದ ಕದಂ, ಗದ್ದೆಯಲ್ಲಿ ಸುಮಾರು 80 ಮಾವಿನ ಗಿಡಗಳಿವೆ. ರಸಗೊಬ್ಬರ , ಔಷಧಿ ಸಿಂಪಡಣೆ ಮಾಡಿ ಕಷ್ಟಪಟ್ಟು 25 ಕ್ವಿಂಟಲ್‌ ಬೆಳೆದರೂ ಮಾರುಕಟ್ಟೆಯಲ್ಲಿ ಸೂಕ್ತ ದರವಿಲ್ಲ ಎಂದರು.

‘ತಾಲ್ಲೂಕಿನಲ್ಲಿ ಅಂದಾಜು 585 ಹೆಕ್ಟೇರ್‌ನಲ್ಲಿ 4,400 ಟನ್ ಮಾವು ಬೆಳೆಯಲಾಗಿದೆ.  ಮಾವಿನ ಬೆಳೆ ಹಾನಿಯಾದಲ್ಲಿ ಪರಿಹಾರ ಸಹ ನೀಡಲಾಗುವುದು’ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎ.ಆರ್.ಹೇರಿಯಾಳ ಹೇಳಿದರು.

–ಸಂತೋಷ ಜಿ.ಹಬ್ಬು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry