18 ಡಿವೈಎಸ್‌ಪಿ ಅಧಿಕಾರಿಗಳಿಗೆ ಎಸ್‌ಪಿಯಾಗಿ ಬಡ್ತಿ

7

18 ಡಿವೈಎಸ್‌ಪಿ ಅಧಿಕಾರಿಗಳಿಗೆ ಎಸ್‌ಪಿಯಾಗಿ ಬಡ್ತಿ

Published:
Updated:
18 ಡಿವೈಎಸ್‌ಪಿ ಅಧಿಕಾರಿಗಳಿಗೆ ಎಸ್‌ಪಿಯಾಗಿ ಬಡ್ತಿ

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 18 ಡಿವೈಎಸ್‌ಪಿ ವೃಂದದ ಅಧಿಕಾರಿಗಳಿಗೆ ಸೂಪರಿಂಟೆಂಡೆಂಟ್ (ಎಸ್‌ಪಿ) ಅಧಿಕಾರಿಗಳಾಗಿ ರಾಜ್ಯ ಸರ್ಕಾರ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.

ಮುಂಬಡ್ತಿ ನೀಡಿರುವ ಹುದ್ದೆಗಳು ಸಿವಿಲ್‌ ಶ್ರೇಣಿ ಹುದ್ದೆಗಳಾಗಿದ್ದು ನಾನ್ ಐಪಿಎಸ್ ವ್ಯಾಪ್ತಿಗೆ ಸೇರುತ್ತವೆ. ಈ ಅಧಿಕಾರಿಗಳ ಸ್ಥಳ ನಿಯುಕ್ತಿಯ ಬಗ್ಗೆ ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬಡ್ತಿ ಪಡೆದ ಅಧಿಕಾರಿಗಳು: ನಾಗರಾಜ್‌ ಎಂಪಿ, ಮಾದಯ್ಯ ಕೆ.ಎನ್‌, ಪವಾರ್ ಡಿ.ಎಸ್, ರಾಜೇಂದ್ರ ಸಿ.ಆರ್, ರಾಜೇಂದ್ರ ಕುಮಾರ್ ಎ.ಬಿ, ಪ್ರಮೋದ್ ರಾವ್ ಎನ್‌.ಟಿ, ದಾವೂದ್‌ ಖಾನ್‌ ಎಚ್‌.ಟಿ, ನಾಯಕ್ ಉದಯ್ ಎಂ, ಜಗದೀಶ್ ಜಿ.ಎ, ಪಾಟೀಲ್ ಆರ್.ಕೆ, ಜ್ಯೋತಿ ವೈಜ್ಯನಾಥ್, ಕೆ, ಅಣ್ಣಪ್ಪನಾಯಕ್, ನೂರುಲ್ಲಾ ಷರೀಪ್‌, ಉಮೇಶ್ ಸಿದ್ದಪ್ಪ ಶಿವಳ್ಳಿ, ಜಯರಾಮು ಕೆ.ಬಿ, ಎ.ಆರ್, ಬಲರಾಮೇಗೌಡ, ಓಬಳೇಶ್, ಬಿ.ಎನ್‌, ಪ್ರಭಾಕರ್ ಬಿ.ಬಾರ್ಕಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry