ಮಲ್ಯ ಅರ್ಜಿ: ನಾಳೆಗೆ ಮುಂದೂಡಿಕೆ

7

ಮಲ್ಯ ಅರ್ಜಿ: ನಾಳೆಗೆ ಮುಂದೂಡಿಕೆ

Published:
Updated:
ಮಲ್ಯ ಅರ್ಜಿ: ನಾಳೆಗೆ ಮುಂದೂಡಿಕೆ

ಬೆಂಗಳೂರು: ಬ್ಯಾಂಕುಗಳ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಜೂನ್‌ 1ಕ್ಕೆ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಮೇಲ್ಮನವಿದಾರರು ಹಾಗೂ ಪ್ರತಿವಾದಿಗಳ ಕಡೆಯ ವಾದ-ಪ್ರತಿವಾದ ಆಲಿಸಿತು.

ಮಲ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಜಿ.ರಾಘವನ್, ‘ಡಿಆರ್‌ಎಟಿ ತನ್ನ ವ್ಯಾಪ್ತಿ ಮೀರಿ ಹಣ ಠೇವಣಿ ಇರಿಸಲು ಆದೇಶಿಸಿದೆ. ಆದ್ದರಿಂದ ಈ ಆದೇಶ ರದ್ದುಪಡಿಸಬೇಕು’ ಎಂದು ಕೋರಿದರು.

ಬ್ಯಾಂಕುಗಳ ಒಕ್ಕೂಟದ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರು, ‘ವಿಜಯ್ ಮಲ್ಯ ಸುಮಾರು ₹ 10 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲ ತೀರಿಸಬೇಕಿದೆ’ ಎಂದರು.

‘ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್‌ಟಿ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿತ್ತು. ಇದರನ್ವಯ ಚೆನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ (ಡಿಆರ್‌ಎಟಿ) ಕಂಪನಿಗೆ ₹ 3,101 ಕೋಟಿ ರೂಪಾಯಿ ಠೇವಣಿ ಇರಿಸುವಂತೆ ಆದೇಶಿಸಿತ್ತು. ಆ ಆದೇಶ ಸರಿ ಇದೆ ಮತ್ತು ಅಂತಹ ಆದೇಶ ನೀಡುವ ಅಧಿಕಾರ ಡಿಆರ್‌ಎಟಿಗೆ ಇದೆ’ ಎಂದು ಪ್ರತಿಪಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry