ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನನಿ ತಾನೆ ಮೊದಲ ಗುರುವು

Last Updated 31 ಮೇ 2018, 19:30 IST
ಅಕ್ಷರ ಗಾತ್ರ

‘ಜನನಿ ತಾನೆ ಮೊದಲ ಗುರುವು’ ಈ ಕವಿವಾಣಿ ನನ್ನ ಮಟ್ಟಿಗೆ ಅಕ್ಷರಶಃ ನಿಜವಾಗಿದೆ. ಮೂರು ವರ್ಷದವಳಿದ್ದಾಗ ನನ್ನ ತಾಯಿಯೇ ಅಕ್ಷರಾಭ್ಯಾಸ ಪ್ರಾರಂಭಿಸಿ ಕನ್ನಡ ಕಲಿಸಿದರು.

ನಾನು 1ನೇ ತರಗತಿ ಸೇರುವಾಗ ಕನ್ನಡವನ್ನು ಸಲೀಸಾಗಿ ಓದಿ, ಬರೆಯುವಂತಾಗಿದ್ದೆ. ನನ್ನ ಜೊತೆಗೆ ಇತರ ಮಕ್ಕಳಿಗೂ ಕಲಿಸುತ್ತಾ ನನ್ನ ತಂದೆಯ ಅಗಲಿಕೆಯ ನೋವನ್ನು ಮರೆಯಲು ಅಮ್ಮ ಪ್ರಯತ್ನಿಸಿದರು. ಶಾಲೆಯಲ್ಲಿಯೂ ಉತ್ತಮ ಶಿಕ್ಷಕರು ದೊರೆತರು. ನನಗೆ ಕನ್ನಡವೆಂದರೆ ಅಚ್ಚುಮೆಚ್ಚು. ನಾನು ಒಬ್ಬ ಸಾಹಿತಿಯಾಗಲು ಬಯಸಿದೆ. ಕನ್ನಡ ವ್ಯಾಕರಣದ ಛಂದಸ್ಸು, ಅಲಂಕಾರಗಳು ನನಗೆ ತುಂಬಾ ಹಿಡಿಸಿದವು. ಓದು ಮುಗಿದ ಮೇಲೆ ಕಥೆ,ಕವನಗಳನ್ನು ಬರೆದೆ. ಇದಕ್ಕೆಲ್ಲ ಮೂಲಕಾರಣರಾದ ನನ್ನ ತಾಯಿಯೇ ನನ್ನ ಮೆಚ್ಚಿನ ಶಿಕ್ಷಕಿ.

–ಕೆ.ಎಸ್‌.ಸವಿತಾ, ಕಬ್ಬೂರ, ಹಾವೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT