ಸುಧಾರಿತ ಪಿನಾಕ ಕ್ಷಿಪಣಿ ಯಶಸ್ವಿ ಪರೀಕ್ಷೆ

7

ಸುಧಾರಿತ ಪಿನಾಕ ಕ್ಷಿಪಣಿ ಯಶಸ್ವಿ ಪರೀಕ್ಷೆ

Published:
Updated:
ಸುಧಾರಿತ ಪಿನಾಕ ಕ್ಷಿಪಣಿ ಯಶಸ್ವಿ ಪರೀಕ್ಷೆ

ಬಾಲಸೋರ್, ಒಡಿಶಾ: ಹೆಚ್ಚು ದೂರ ಕ್ರಮಿಸಬಲ್ಲ, ಉತ್ತಮ ಮಾರ್ಗದರ್ಶಕ ವ್ಯವಸ್ಥೆ ಅಳವಡಿಸಿರುವ ಸುಧಾರಿತ ಪಿನಾಕ ಕ್ಷಿಪಣಿಯನ್ನು (ಮಾರ್ಕ್–2) ಇಲ್ಲಿನ ಚಾಂದಿಪುರದಲ್ಲಿ ಎರಡನೇ ದಿನವೂ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಮಲ್ಟಿ ಬ್ಯಾರಲ್ ಲಾಂಚರ್ ಮೂಲಕ ಗುರುವಾರ ಬೆಳಗ್ಗೆ 10.35ಕ್ಕೆ ಉಡಾವಣೆ ಮಾಡಲಾಯಿತು. ಬುಧವಾರವೂ ಪರೀಕ್ಷೆ ನಡೆದಿತ್ತು. ಈ ಮೊದಲಿನ ಮಾರ್ಕ್–1 ಕ್ಷಿಪಣಿಗೆ ಮಾರ್ಗದರ್ಶಕ ವ್ಯವಸ್ಥೆ ಇರಲಿಲ್ಲ. ಈ ಬಾರಿಯ ಕ್ಷಿಪಣಿಯನ್ನು ಮಾರ್ಗದರ್ಶಕ ವ್ಯವಸ್ಥೆಗೆ ರೂಪಾಂತರಗೊಳಿಸಲಾಗಿದೆ. ಜತೆಗೆ ಪಥದರ್ಶಕ ವ್ಯವಸ್ಥೆ, ನಿಯಂತ್ರಿತ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಡಿ (ಡಿಆರ್‌ಡಿಒ) ಕಾರ್ಯ ನಿರ್ವಹಿಸುವ ಹೈದರಾಬಾದ್‌ನ ಸಂಶೋಧನಾ ಕೇಂದ್ರವು (ಆರ್‌ಸಿಐ) ಇವುಗಳನ್ನು ಅಭಿವೃದ್ಧಿಪಡಿಸಿದೆ. ಇದು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದೆ.

ಪಿನಾಕ ಮಾರ್ಕ್–1ರ ಬಳಿಕ ಅಭಿವೃದ್ಧಿಪಡಿಸಿರುವ ಮಾರ್ಕ್–2 ಕ್ಷಿಪಣಿಯು, 44 ಸೆಕೆಂಡ್‌ಗಳಲ್ಲಿ 12 ರಾಕೆಟ್‌ಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ.

**

ಕ್ಷಿಪಣಿಯ ವ್ಯಾಪ್ತಿ ಹಾಗೂ ನಿಖರತೆಯನ್ನು ಹೆಚ್ಚಿಸಲಾಗಿದೆ. ಈ ಮೊದಲು 40 ಕಿ.ಮೀ ಇದ್ದ ಕ್ಷಿಪಣಿಯ ವ್ಯಾಪ್ತಿಯನ್ನು 70 ಕಿ.ಮೀ.ಗೆ ಹಿಗ್ಗಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry