2014ರಿಂದ ಇಲ್ಲಿವರೆಗೆ ನಡೆದ ಲೋಕಸಭಾ ಕ್ಷೇತ್ರದ 27 ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 5 ಸೀಟು!

7

2014ರಿಂದ ಇಲ್ಲಿವರೆಗೆ ನಡೆದ ಲೋಕಸಭಾ ಕ್ಷೇತ್ರದ 27 ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 5 ಸೀಟು!

Published:
Updated:
2014ರಿಂದ ಇಲ್ಲಿವರೆಗೆ ನಡೆದ ಲೋಕಸಭಾ ಕ್ಷೇತ್ರದ 27 ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 5 ಸೀಟು!

ನವದೆಹಲಿ: ಲೋಕಸಭೆಯ ನಾಲ್ಕು ಮತ್ತು ವಿವಿಧ ರಾಜ್ಯಗಳ ಹತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಒಟ್ಟು 14 ಕ್ಷೇತ್ರಗಳಲ್ಲಿ 11ರಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ಧಾರೆ. ಎನ್‌ಡಿಎಗೆ ಮೂರರಲ್ಲಿ ಮಾತ್ರ ಗೆಲುವು ದಕ್ಕಿದೆ. ಮಹಾರಾಷ್ಟ್ರದ ಪಾಲ್ಘರ್‌ ಲೋಕಸಭಾ ಕ್ಷೇತ್ರ  ಮತ್ತು ಉತ್ತರಾಖಂಡದ ಥರಾಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ.

ಆದಾಗ್ಯೂ, ರಾಜ್ಯ ಮತ್ತು ಸಾರ್ವತ್ರಿಕ ಚುನಾವಣೆಗಳ ಗೆಲುವಿಗೆ ಹೋಲಿಸಿದರೆ ಉಪಚುನಾವಣೆಯಲ್ಲಿ  ಬಿಜೆಪಿ ಪರಾಭವಗೊಂಡಿದ್ದು ಅಷ್ಟೇನು ದೊಡ್ಡ ಸಂಗತಿಯಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು.

ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷಗಳ ಮೈತ್ರಿ ಫಲ ನೀಡಿದೆ. ಆರ್‌ಎಲ್‌ಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಬಸ್ಸುಮ್‌ ಹಸನ್‌ ಅವರು ಅಲ್ಲಿ ಗೆದ್ದಿದ್ದಾರೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಪಕ್ಷ ಅವರಿಗೆ ಬೆಂಬಲ ನೀಡಿದ್ದವು. ನಾಗಾಲ್ಯಾಂಡ್‌ ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿಯ ಮಿತ್ರ ಪಕ್ಷವಾಗಿರುವ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿ (ಎನ್‌ಡಿಪಿಪಿ) ಗೆಲುವು ಸಾಧಿಸಿದೆ.

ಅಂದಹಾಗೆ 2014ರಿಂದ ಇಲ್ಲಿಯವರೆಗೆ 27 ಲೋಕಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಇದರಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು ಕೇವಲ 5 ಸೀಟು. ಕಾಂಗ್ರೆಸ್ ಕೂಡಾ ಗೆಲುವು ಸಾಧಿಸಿದ್ದು ಐದೇ ಸೀಟುಗಳಲ್ಲಿ. ಆದರೆ ತೃಣಮೂಲ ಕಾಂಗ್ರೆಸ್  ನಾಲ್ಕು ಮತ್ತು ಸಮಾಜವಾದಿ ಪಾರ್ಟಿ 3, ತೆಲಂಗಾಣ  ರಾಷ್ಟ್ರಸಮಿತಿ(ಟಿಆರ್‍ಎಸ್) 2, ಎನ್‍ಸಿಪಿ, ನ್ಯಾಷನಲ್ ಕಾನ್ಫರೆನ್ಸ್, ಮುಸ್ಲಿಂ ಲೀಗ್, ಆರ್‍‍ಜೆಡಿ, ಎನ್‍ಡಿಪಿಪಿ, ಆರ್‍ಎಲ್‍ಡಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ತಲಾ ಒಂದು ಸೀಟುಗಳನ್ನು ಗೆದ್ದು ಕೊಂಡಿದೆ.

ಉಪ ಚುನಾವಣೆ ನಡೆದ 27 ಸೀಟುಗಳಲ್ಲಿ  11 ಸೀಟುಗಳು ಬಿಜೆಪಿ ಅಧಿಪತ್ಯವಿದ್ದ ಸೀಟುಗಳಾಗಿದ್ದವು. ಇದರಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. 2015ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಧ್ಯಪ್ರದೇಶದ ರಾತಲಾಂ ಕ್ಷೇತ್ರ ಬಿಜೆಪಿ ಕೈ ಜಾರಿತು. ಆದರೆ  2016ರಲ್ಲಿ ಅಸ್ಸಾಂಲ್ಲಿ ಲಕ್ಷ್ಮಿಂಪುರ್, ಮಧ್ಯಪ್ರದೇಶದ ಸಹ್‍ಡಾಲ್ ಕ್ಷೇತ್ರದಲ್ಲಿ ಬಿಜೆಪಿ  ಗೆಲುವು ಸಾಧಿಸಿತು. ಮೇಘಾಲಯದಲ್ಲಿ ಮಿತ್ರಪಕ್ಷವಾದ  ಎನ್‍ಸಿಪಿ ಕೂಡಾ ಗೆದ್ದಿತ್ತು.

2017ರ ಚುನಾವಣೆ ಗಮನಿಸಿದರೆ ಅದು ಬಿಜೆಪಿ ಪಾಲಿಗೆ ನಷ್ಟದ ವರ್ಷವಾಗಿತ್ತು. ಪಂಜಾಬ್‍ನ ಗುರುದಾಸ್ ಪುರ್ ಮತ್ತು ಶ್ರೀನಗರ  ಬಿಜೆಪಿ ಮಿತ್ರ ಪಕ್ಷವಾದ ಪಿಡಿಪಿಯ ಕೈ ಜಾರಿತು.

ನರೇಂದ್ರ ಮೋದಿಯವರು ಪ್ರಧಾನಿ ಪಟ್ಟಕ್ಕೇರಿದನಂತರ ನಡೆದ ಉಪ ಚುನಾವಣೆಗಳ ಫಲಿತಾಂಶದ ಪಟ್ಟಿ ಈ ರೀತಿ ಇದೆ.

2014

ಬೀಡ್, ಮಹಾರಾಷ್ಟ್ರ  - ಬಿಜೆಪಿ

ಕಂದಾಮಾಲ್, ಒಡಿಶಾ- ಬಿಜೆಪಿ

ಮೇಡಕ್, ತೆಲಂಗಾಣ- ಟಿಆರ್‍ಎಸ್

ವಡೋದರಾ , ಗುಜರಾತ್ -   ಬಿಜೆಪಿ

ಮೈನ್‍ಪುರಿ , ಉತ್ತರ ಪ್ರದೇಶ - ಎಸ್‍ಪಿ2015

ರಾತ್‍ಲಾಂ, ಮಧ್ಯ ಪ್ರದೇಶ - ಬಿಜೆಪಿಯ ಸೀಟು ಆಗಿತ್ತು, ಕಾಂಗ್ರೆಸ್ ಗೆಲುವು

ವಾರಾಂಗಲ್, ತೆಲಂಗಾಣ - ಟಿಆರ್‍ಎಸ್

ಬಾಂಗೋನ್, ಪಶ್ಚಿಮ ಬಂಗಾಳ - ಟಿಎಂಸಿ

2016

ಲಖಿಂಪುರ್, ಅಸ್ಸಾಂ- ಬಿಜೆಪಿ

ಶಹದೋಲ್, ಮಧ್ಯ ಪ್ರದೇಶ - ಬಿಜೆಪಿ

ಕೂತ್‍ಬೆಹರ್, ಪಶ್ಚಿಮ ಬಂಗಾಳ- ಟಿಎಂಸಿ

ತಾಮ್ಲುಕ್ , ಪಶ್ಚಿಮ ಬಂಗಾಳ - ಟಿಎಂಸಿ

ತುರಾ, ಮೇಘಾಲಯ -ಎನ್‍ಪಿಪಿ

2018

ಅಲ್ವಾರ್, ರಾಜಸ್ಥಾನ - ಬಿಜೆಪಿ ಸೀಟು ಆಗಿತ್ತು, ಕಾಂಗ್ರೆಸ್‍ಗೆ ಗೆಲುವು

ಅಜ್ಮೇರ್, ರಾಜಸ್ಥಾನ-  ಬಿಜೆಪಿ ಸೀಟು ಆಗಿತ್ತು, ಕಾಂಗ್ರೆಸ್‍ಗೆ ಗೆಲುವು

ಉಲುಬೇರಿಯಾ, ಪಶ್ಚಿಮ ಬಂಗಾಳ - ಟಿಎಂಸಿ

ಗೋರಖ್‍ಪುರ, ಉತ್ತರ ಪ್ರದೇಶ - ಬಿಜೆಪಿ ಸೀಟು ಆಗಿತ್ತು, ಸಮಾಜವಾದಿ ಪಾರ್ಟಿ ಗೆಲುವು

ಫುಲ್‍ಪುರ್, ಉತ್ತರ ಪ್ರದೇಶ - ಬಿಜೆಪಿ ಸೀಟು ಆಗಿತ್ತು, ಸಮಾಜವಾದಿ ಪಾರ್ಟಿ ಗೆಲುವು

ಅರಾರಿಯಾ, ಬಿಹಾರ್ - ಆರ್‍‍ಜೆಡಿ

ಕೈರಾನಾ, ಉತ್ತರ ಪ್ರದೇಶ-   ಬಿಜೆಪಿ ಸೀಟು ಆಗಿತ್ತು, ಸಮಾಜವಾದಿ, ಆರ್‍ಎಲ್‍ಡಿ ಗೆಲುವು

ಪಾಲ್ಘರ್‌ , ಮಹಾರಾಷ್ಟ್ರ - ಬಿಜೆಪಿ

ಭಂಡಾರಾ-ಗೊಂಡಿಯಾ, ಮಹಾರಾಷ್ಟ್ರ-  ಬಿಜೆಪಿ ಸೀಟು ಆಗಿತ್ತು, ಎನ್‌ಸಿಪಿ ಗೆಲುವು

ನಾಗಾಲ್ಯಾಂಡ್, ನಾಗಾಲ್ಯಾಂಡ್ -  ಎನ್‍ಪಿಎಫ್ ಸೀಟು ಆಗಿತ್ತು, ಎನ್‍ಡಿಪಿಪಿ ಗೆಲುವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry