ಸಿ.ಎಂ ಸಭೆಗಳಲ್ಲಿ ಮೊಬೈಲ್ ನಿಷಿದ್ಧ

7

ಸಿ.ಎಂ ಸಭೆಗಳಲ್ಲಿ ಮೊಬೈಲ್ ನಿಷಿದ್ಧ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಜೊತೆ ನಿಗದಿತ ಸಭೆಗಳಲ್ಲಿ ಭಾಗವಹಿಸುವರು ಕಡ್ಡಾಯವಾಗಿ ಮೊಬೈಲ್ ತರದಂತೆ ಆದೇಶಿಸಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ‘ಒಂದು ವೇಳೆ ಮೊಬೈಲ್‌ಗಳನ್ನು ತಂದವರು ಸಭೆಯ ಸಮನ್ವಯಾಧಿಕಾರಿಗೆ ಒಪ್ಪಿಸಿ, ಸಭೆಯ ನಂತರ ಪಡೆದುಕೊಳ್ಳಬೇಕು’ ಎಂದು ತಿಳಿಸಲಾಗಿದೆ.

‘ಸಭೆಗಳಲ್ಲಿ ಭಾಗವಹಿಸುವವರು ಮೊಬೈಲ್‌ ದೂರವಾಣಿ ಉಪಯೋಗಿಸುವುದರಿಂದ ಚರ್ಚೆಯಾಗುವ ವಿಷಯಗಳ ಮೇಲಿನ ಪ್ರಾಮುಖ್ಯತೆ ಕಡಿಮೆಯಾಗುತ್ತದೆ ಹಾಗೂ ವಿಷಯಾಂತರವಾಗುತ್ತದೆ. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry