ಇಟಲಿ ಎದುರು ಗೆದ್ದ ಫ್ರಾನ್ಸ್‌

7

ಇಟಲಿ ಎದುರು ಗೆದ್ದ ಫ್ರಾನ್ಸ್‌

Published:
Updated:
ಇಟಲಿ ಎದುರು ಗೆದ್ದ ಫ್ರಾನ್ಸ್‌

ಪ್ಯಾರಿಸ್‌: ಅಮೋಘ ಆಟ ಆಡಿದ ಫ್ರಾನ್ಸ್‌ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಗೆದ್ದಿದೆ.

ಅಲಿಯಂಜ್‌ ರಿವಿಯೆರಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪೈಪೋಟಿಯಲ್ಲಿ ಫ್ರಾನ್ಸ್‌ 3–1 ಗೋಲುಗಳಿಂದ ಇಟಲಿ ತಂಡವನ್ನು ಮಣಿಸಿತು.

ಈ ಪಂದ್ಯವನ್ನು ಫ್ರಾನ್ಸ್‌ನ ಸುಮಾರು 76 ಲಕ್ಷ ಮಂದಿ ಟಿ.ವಿ.ಯಲ್ಲಿ ವೀಕ್ಷಿಸಿದ್ದಾರೆ.

ಸೋಮವಾರ ನಡೆದಿದ್ದ ಮೊದಲ ಅಭ್ಯಾಸ ಪಂದ್ಯದಲ್ಲಿ 2–0 ಗೋಲುಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿದ್ದ ಫ್ರಾನ್ಸ್‌ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು.

ಎಂಟನೇ ನಿಮಿಷದಲ್ಲಿ ಈ ತಂಡ ಖಾತೆ ತೆರೆಯಿತು. ಬಾರ್ಸಿಲೋನಾ ಕ್ಲಬ್‌ ಪರ ಆಡಿದ ಅನುಭವ ಹೊಂದಿರುವ ಸೆಂಟರ್‌ ಬ್ಯಾಕ್‌ ವಿಭಾಗದ ಆಟಗಾರ ಸ್ಯಾಮುಯೆಲ್‌ ಉಮಟಿಟಿ ಚೆಂಡನ್ನು ಗುರಿ ಮುಟ್ಟಿಸಿ ಫ್ರಾನ್ಸ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ನಂತರ ತಂಡ ಆಟದ ವೇಗ ಹೆಚ್ಚಿಸಿಕೊಂಡಿತು. 29ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಆ್ಯಂಟೋಯಿನ್‌ ಗ್ರೀಜ್‌ಮನ್‌ ಗೋಲಾಗಿ ಪರಿವರ್ತಿಸಿದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಇಟಲಿ ತಂಡದ ಲಿಯೊನಾರ್ಡೊ ಬೊನುಕ್ಕಿ ಅವಕಾಶ ನೀಡಲಿಲ್ಲ. 36ನೇ ನಿಮಿಷದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

2–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ಫ್ರಾನ್ಸ್‌ ತಂಡ ದ್ವಿತೀಯಾರ್ಧದಲ್ಲೂ ಮೋಡಿ ಮಾಡಿತು.

60ನೇ ನಿಮಿಷದವರೆಗೆ ಇಟಲಿ ಆಟಗಾರರಿಂದ ಪ್ರಬಲ ಪೈಪೋಟಿ ಎದುರಿಸಿದ ತಂಡ 63ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿಕೊಂಡು ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು.

ಸಹಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಒಸುಮಾನ್‌ ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿದರು. ನಂತರದ ಅವಧಿಯಲ್ಲಿ ಇಟಲಿ ತಂಡ ಗೋಲು ಗಳಿಸಲು ನಡೆಸಿದ ಪ್ರಯತ್ನಗಳನ್ನು ಫ್ರಾನ್ಸ್‌ ತಂಡದ ರಕ್ಷಣಾ ವಿಭಾಗದ ಆಟಗಾರರು ವಿಫಲಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry