ಶಿರಸಿ: ಬಸ್ಸು–ಕಾರಿನ ನಡುವೆ ಅಪಘಾತ, ಒಬ್ಬರು ಸಾವು

7

ಶಿರಸಿ: ಬಸ್ಸು–ಕಾರಿನ ನಡುವೆ ಅಪಘಾತ, ಒಬ್ಬರು ಸಾವು

Published:
Updated:
ಶಿರಸಿ: ಬಸ್ಸು–ಕಾರಿನ ನಡುವೆ ಅಪಘಾತ, ಒಬ್ಬರು ಸಾವು

ಶಿರಸಿ: ತಾಲ್ಲೂಕಿನ ಹುಡೇಲಕೊಪ್ಪದ ಬಳಿ ಭಾನುವಾರ ಸಂಜೆ ಸಾರಿಗೆ ಸಂಸ್ಥೆಯ ಬಸ್ಸು ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಮೃತಪಟ್ಟವರ ಹೆಸರು ಇನ್ನಷ್ಟೇ ಗೊತ್ತಾಗಬೇಕಾಗಿದೆ.

ರಸ್ತೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಹಿಂದಿನಿಂದ ಬರುತ್ತಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ.

ತಾಲ್ಲೂಕಿನಲ್ಲಿ ಸತತ ಮೂರು ದಿನಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಶನಿವಾರ ಯಡಳ್ಳಿ ಸಮೀಪ ಕಾರು ಮತ್ತು ಬೈಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಶುಕ್ರವಾರ ರಾಗಿಹೊಸಳ್ಳಿ ಸಮೀಪ ಕ್ರೂಸರ್ ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತದಲ್ಲಿ ಗದಗ ಜಿಲ್ಲೆ ರೋಣದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದರು.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry