ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಮಾಡುವ ಆಸೆಗೆ ದಾರಿಯೇನು?

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

1. ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಐಎಎಸ್‌ ಮತ್ತು ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕೆಂಬ ಆಸೆ ಇದೆ. ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಏನು ಮಾಡಬೇಕು? ಅದರ ಬಗ್ಗೆ ಮಾಹಿತಿಗಳು ಯಾವ ಪತ್ರಿಕೆ ಹಾಗೂ ಮ್ಯಾಗಜಿನ್‌ನಲ್ಲಿ ದೊರಕುತ್ತದೆ? ಆ ಪರೀಕ್ಷೆಯನ್ನು ಎದುರಿಸಲು ಯಾವ ಪುಸ್ತಕಗಳನ್ನು ಓದಬೇಕು ತಿಳಿಸಿ.

ಪವನ್, ಊರು ಬೇಡ

ಸಿವಿಲ್ ಸರ್ವಿಸ್‌ ಪರೀಕ್ಷೆಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್‌ ಕಮೀಷನ್ (UPSC) ಇವರು, ಐಎಎಸ್ (IAS), ಐಪಿಎಸ್ (IPS), ಐಎಫ್ಎಸ್(IFS) ಹುದ್ದೆಗಳನ್ನು ತುಂಬಲು ಈ ಪರೀಕ್ಷೆಯನ್ನು ಆಲ್ ಇಂಡಿಯಾ ಮಟ್ಟದಲ್ಲಿ ನಡೆಸುತ್ತಾರೆ.

ಈ ಪರೀಕ್ಷೆ ಮೂರು ಹಂತದಲ್ಲಿ ನಡೆಯುತ್ತದೆ.

1. ಪ್ರಿಲಿಮಿನರಿ ಪರೀಕ್ಷೆ (Preliminary Exam),

2. ಮೈನ್ ಪರೀಕ್ಷೆ (Main exam for those who pass preliminary)

3. ಪ್ರಿಲಿಮಿನರಿ ಪರೀಕ್ಷೆ ಪಾಸ್ ಆದರೆ, ಮೈನ್ ಪರೀಕ್ಷೆಯನ್ನು ಬರೆಯಬಹುದು.

3. ಪರ್ಸನಾಲಿಟಿ ಟೆಸ್ಟ್ ಇಂಟರ್‌ವ್ಯೂ: ಪ್ರಿಲಿಮಿನರಿ ಪರೀಕ್ಷೆಯ ಪ್ರಕಟಣೆಯನ್ನು ಫೆಬ್ರುವರಿ 7ರಂದು ಪ್ರಕಟಿಸಲಾಗಿತ್ತು. ಪ್ರಿಲಿಮಿನರಿ ಪರೀಕ್ಷೆಯನ್ನು ಜೂನ್ 3ರಂದು ನಡೆಸಲಾಗುತ್ತದೆ.

ಮೈನ್ ಪರೀಕ್ಷೆಯನ್ನು ಸೆಪ್ಟೆಂಬರ್ 28ರಂದು ನಡೆಸುತ್ತಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 6. ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ನೀವು ಕೊನೆಯ ವರ್ಷದಲ್ಲಿರುವುದರಿಂದ ಮುಂದಿನ ನೋಟಿಫಿಕೇಶನ್‌ ಬಂದ ತಕ್ಷಣ ಹಾಕಿ. ಪರೀಕ್ಷೆಯ ಸೆಂಟರ್‌ಗಳನ್ನು ಆದ್ಯತೆಯ ಪ್ರಕಾರ ಕೊಡುತ್ತಾರೆ.‌

ಸಿಟಿಜನ್‌ ಆಫ್ ಇಂಡಿಯಾ, ಪದವೀಧರರು (ಅಂಗೀಕೃತ ಯೂನಿವರ್ಸಿಟಿ), 21 ವರ್ಷ ವಯಸ್ಸು (ಎಸ್‌ಟಿ, ಎಸ್‌ಸಿ, ಓಬಿಸಿಯವರಿಗೆ ರಿಯಾಯಿತಿ ಇದೆ) ಜನರಲ್ ಕ್ಯಾಟಗರಿಯವರು 6 ಸಲ ಈ ಪರೀಕ್ಷೆ ಪಾಸ್ ಮಾಡಲು ಪ್ರಯತ್ನಿಸಬಹುದು.

ಓಬಿಸಿಯವರು 9 ಸಲ, ಎಸ್‌ಸಿ, ಎಸ್‌ಟಿಯವರು ಎಷ್ಟು ಸಲ ಬೇಕಾದರೂ ಬರೆಯಬಹುದು.  (37 ವರ್ಷದ ತನಕ ಮಾತ್ರ).

ಈ ಪರೀಕ್ಷೆಯನ್ನು ಗ್ರೂಪ್‌ ‘ಎ’ ಮತ್ತು ಗ್ರೂಪ್ ‘ಬಿ’ ಸರ್ವಿಸ್‌ಗಳಿಗೆ ಬರೆಯಬಹುದು. ಗ್ರೂಪ್ ‘ಐ’– ಐಎಎಸ್, ಐಪಿಎಸ್,  ಐಎಫ್‌ಎಸ್‌  (Indian Forest Service)  ಇದು ಮೂರು, ಆಲ್ ಇಂಡಿಯಾ ಸರ್ವಿಸ್‌ ಮತ್ತು ಸೆಂಟ್ರಲ್ ಸರ್ವಿಸ್‌.

ಗ್ರೂಪ್ ‘ಎ’ 1. ಇಂಡಿಯನ್ ಆಡಿಟ್ ಮತ್ತು ಅಕೌಂಟ್ಸ್ ಸರ್ವಿಸ್‌ (IA and AS)

2. ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವಿಸ್‌ (ICAS)

3. ಇಂಡಿಯನ್ ಕಾರ್ಪೋರೇಟ್‌ ‘ಲಾ’ ಸರ್ವಿಸ್‌ (ICLS)

4. ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ ಸರ್ವಿಸ್‌ (IDAS)

5. ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್‌ (IDEB)

6. ಇಂಡಿಯನ್ ಫಾರಿನ್ ಸರ್ವಿಸ್‌ (IFS)]

7. ಇಂಡಿಯನ್ ಇನ್ಫರ್ಮೆಶನ್ ಸರ್ವಿಸ್‌ (IIS)

8. ಇಂಡಿಯನ್ ಆಡ್ರೆಸ್‌ ಫ್ಯಾಕ್ಟರೀಸ್ ಸರ್ವಿಸ್‌  (IOFS)

9. ಇಂಡಿಯನ್ ಪೋಸ್ಟಲ್ ಸರ್ವಿಸ್‌ (IPOS)

ಇಂಡಿಯನ್ ರೈಲ್ವೇಸ್, ಇಂಡಿಯನ್ ರೆವಿನ್ಯೂ, ಇಂಡಿಯನ್ ಟ್ರೇಡ್ ಸರ್ವಿಸ್‌ – ಈ ರೀತಿ ಹಲವಾರು ವಿಭಾಗಗಳಿವೆ.

ಗ್ರೂಪ್ ‘ಬಿ’ ನಲ್ಲಿ ಆರ್ಮ್ಡ್‌ ಫೋಸರ್ಸ್, ಹೆಡ್ ಕ್ವಾರ್ಟಸ್‌, ಸಿವಿಲ್ ಸರ್ವಿಸ್‌ ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ಸಿವಿಲ್ ಸರ್ವಿಸ್‌, ಪಾಂಡಿಚೇರಿ ಪೊಲೀಸ್/ ಸಿವಿಲ್ ಸರ್ವಿಸ್‌.... ಈ ರೀತಿ ಇದೆ.

ಪರೀಕ್ಷೆಯ ಸಂಪೂರ್ಣ ವಿವರಕ್ಕೆ www.upsc.gov.in ಪಡೆಯಬಹುದು.

ಈ ಪರೀಕ್ಷೆಯ ಸಂಪೂರ್ಣ ವಿವರಗಳನ್ನು ಎಂಪ್ಲಾಯ್‌ಮೆಂಟ್ ನ್ಯೂಸ್‌ನಿಂದಲೂ ಪಡೆಯಬಹುದು. ಇದಕ್ಕೆ ಸಂಬಂಧಿಸಿದ ಪುಸ್ತಕಗಳು ದೊರೆಯುತ್ತವೆ. ಅದನ್ನು ಓದಿ, ಕೋಚಿಂಗ್ ಸೆಂಟರ್‌ಗಳಲ್ಲೂ ತರಬೇತಿ ಪಡೆಯಬಹುದು.

**

2. ನಾನು ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ನನಗೆ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಲು ಇಷ್ಟ. ಈ ಕೋರ್ಸ್‌ನ ಕಾಲಾವಧಿ ಏನು? ಉದ್ಯೋಗಾವಕಾಶಗಳು ಏನು? 

–ತೇಜಸ್, ಊರು ಬೇಡ

ಪ್ರಪಂಚದ ಬೆಳವಣಿಗೆ, ಹೊಸ ಹೊಸ ಹೊರದೇಶದ ಬಾಂಧವ್ಯ, ಟೂರಿಸಂ ಇಂಡಸ್ಟ್ರಿಯ ತೀವ್ರ ಪ್ರಗತಿ, ಮೆಡಿಕಲ್ ಟೂರಿಸಂ – ಈ ರೀತಿ ಬೇರೆ ಬೇರೆ ಕ್ಷೇತ್ರದಿಂದ ಜನರು ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಿಸಿನೆಸ್‌ ಅನ್ನು ಊರ್ಜಿತಗೊಳಿಸಲು ಇವರಿಗೆ ಹಿತಕರವಾದ ವಾತಾವರಣದಲ್ಲಿ ತಂಗಲು, ಇಷ್ಟವಾದ ಆಹಾರವನ್ನು ಕೊಡುವುದು, ಟೆನಿಸ್, ಸ್ವಿಮ್ಮಿಂಗ್ ಈ ರೀತಿಯ ಚಟುವಟಿಕೆಗಳನ್ನು ವ್ಯವಸ್ಥೆ ಮಾಡುವುದು ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರರ ಕೆಲಸ.

ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ಆಯ್ಕೆ ಮಾಡಿದವರು:

1. ಫ್ರಂಟ್ ಆಫೀಸ್ ಡಿಪಾರ್ಟ್‌ಮೆಂಟ್

2.  ಹೌಸ್‌ ಕೀಪಿಂಗ್ ಡಿಪಾರ್ಟ್‌ಮೆಂಟ್ (House Keeping)

3. ಎಂಜಿನಿಯರಿಂಗ್ ಡಿಪಾರ್ಟ್‌ಮೆಂಟ್

4. ಅಕೌಂಟಿಂಗ್ ಡಿಪಾರ್ಟ್‌ಮೆಂಟ್

5. ಹ್ಯೂಮನ್‌ ರಿರ್ಸೋರ್ಸ್‌ ಡಿಪಾರ್ಟ್‌ಮೆಂಟ್

6. ಸೆಕ್ಯೂರಿಟಿ ಡಿಪಾರ್ಟ್‌ಮೆಂಟ್

7. ಫುಡ್ ಆ್ಯಂಡ್ ಬೆವರೇಜ್ ಡಿಪಾರ್ಟ್‌ಮೆಂಟ್

ಈ ಎಲ್ಲಾ ಡಿಪಾರ್ಟ್‌ಮೆಂಟ್‌ಗಳು ಯಾವ ರೀತಿ ಕೆಲಸ ಮಾಡುತ್ತವೆ ಅನ್ನುವುದನ್ನು ಕಲಿಯುತ್ತಾರೆ. ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (BHM) ನಾಲ್ಕು ವರ್ಷ ಅವಧಿಯದು.

ಇದರಲ್ಲಿ ಸ್ನಾತಕೋತ್ತರವನ್ನು ಹೊರದೇಶಗಳಲ್ಲೂ ಮಾಡಬಹುದು.

ಪಿಯುಸಿ ನಂತರ ಸೈನ್ಸ್‌, ಆರ್ಟ್ಸ್, ಕಾಮರ್ಸ್ ಸ್ಕೀಮ್‌ನವರು ಮಾತ್ರ ಈ ಕೋರ್ಸ್‌ ಅನ್ನು ಸೇರಬಹುದು.

ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಹೊಟೇಲ್  ಮ್ಯಾನೇಜ್‌ಮೆಂಟ್‌ ಎಂಬಿಎ ಇನ್ ಹೊಟೇಲ್ ಮ್ಯಾನೇಜ್‌ಮೆಂಟ್, ಎಂಎಸ್ಸಿ ಇನ್ ಹಾಸ್ಪಿಟಾಲಿಟಿ ಅಡ್ಮಿನಿಸ್ಟ್ರೇಷನ್ ಈ ರೀತಿ ಸ್ನಾತಕೋತ್ತರ ಕೋರ್ಸ್ ಮಾಡಬಹುದು.

ಬೆಂಗಳೂರು ವಿಶ್ವವಿದ್ಯಾಲಯದ ಹಲವಾರು ಕಾಲೇಜುಗಳಲ್ಲಿ ಬಿಎಚ್‌ಎಂ ಕೋರ್ಸ್‌ಗಳು ಲಭ್ಯವಿದೆ. ಹೆಸರಾಂತ ಇನ್‌ಸ್ಟಿಟ್ಯೂಟ್‌ಗಳಾದ

1. Welcomegroup Graduate School of Hotel Administration, Manipal

2. Institute of Hotel Management Catering and Nutrition (IHM), New Delhi

3. Natural Council of Hotel Management and Catering Technology

4. Oberoi Systematic Training and Education Program

5. Institute of Hotel Management, Aurangabad (IHM)

and many others...

ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡಲು ನಿಮ್ಮಲ್ಲಿ ಚೆನ್ನಾಗಿ ಮಾತನಾಡುವ ಚತುರತೆ (ಬೇರೆ ಬೇರೆ ಭಾಷೆಗಳಲ್ಲಿ), ತಾಳ್ಮೆ, ನೆಟ್‌ವರ್ಕಿಂಗ್‌ ಸ್ಕಿಲ್ಸ್‌, ಶಿಸ್ತಿನಿಂದ ತಯಾರಾಗಿರುವ ಹಂಬಲ, ಕೇಳುವ ತಾಳ್ಮೆಗಳು ಬಹಳ ಮುಖ್ಯ. ಆಯ್ಕೆ ಮಾಡಲು ಓಬೆರಾಯ್  ಗ್ರೂಪ್‌ನವರು ಅವರದ್ದೇ ಪರೀಕ್ಷೆ ನಡೆಸುತ್ತಾರೆ.

ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್‌ಮೆಂಟ್‌ನವರು, NCHMCT - JEE ಪರೀಕ್ಷೆಯ ಮೂಲಕ ಪಾಸಾದವರನ್ನು ಆಯ್ಕೆ ಮಾಡುತ್ತಾರೆ.

ಉದ್ಯೋಗವಕಾಶಗಳು ಹಲವಾರು ಸ್ಟಾರ್ ಹೋಟೆಲ್‌ಗಳು, ಏರ್‌ಲೈನ್ಸ್‌ ಇಂಡಸ್ಟ್ರಿಗಳು, ರೆಸಾರ್ಟ್‌ಗಳಲ್ಲಿ, ಸ್ಪಾ ಮತ್ತು ವೆಲ್‌ನೆಸ್ ಮ್ಯಾನೇಜ್‌ಮೆಂಟ್, ಇವೆಂಟ್ ಮ್ಯಾನೇಜ್‌ಮೆಂಟ್‌, ವೆಡ್ಡಿಂಗ್ ಕೋ ಆರ್ಡಿನೇಷನ್‌, ಅಮ್ಯೂಸ್‌ಮೆಂಟ್ ಪಾರ್ಕ್‌, ಕ್ಯಾಸಿನೋ, ಕ್ರೂಸ್‌ ಇನ್ನೂ ಅನೇಕ ಕಡೆ... ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT