ರಾಜ್ಯಪಾಲರ ಪ್ರವಾಸ, ಆತಿಥ್ಯ, ಮನರಂಜನೆ ಭತ್ಯೆ ಏರಿಕೆ

7

ರಾಜ್ಯಪಾಲರ ಪ್ರವಾಸ, ಆತಿಥ್ಯ, ಮನರಂಜನೆ ಭತ್ಯೆ ಏರಿಕೆ

Published:
Updated:
ರಾಜ್ಯಪಾಲರ ಪ್ರವಾಸ, ಆತಿಥ್ಯ, ಮನರಂಜನೆ ಭತ್ಯೆ ಏರಿಕೆ

ನವದೆಹಲಿ: ರಾಜ್ಯಪಾಲರ ಭತ್ಯೆಗಳನ್ನು ಹೆಚ್ಚಿಸಿ ಹೊಸ ಮಾರ್ಗದರ್ಶಿ ಸೂತ್ರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪ್ರವಾಸ, ಆತಿಥ್ಯ, ಮನರಂಜನೆ ಮತ್ತು ಪೀಠೋಪಕರಣಗಳ ಭತ್ಯೆಗಳನ್ನು ಏರಿಸಲಾಗಿದೆ.

ಪಶ್ಚಿಮ ಬಂಗಾಳದ ರಾಜ್ಯಪಾಲರು ಅತಿ ಹೆಚ್ಚು ಭತ್ಯೆ ಪಡೆಯಲಿದ್ದಾರೆ. ಅವರಿಗೆ ಪ್ರವಾಸ, ಆತಿಥ್ಯ, ಮನರಂಜನೆ ಮತ್ತು ಇತರ ವೆಚ್ಚಗಳಿಗಾಗಿ ವ‌ರ್ಷಕ್ಕೆ ₹1.81 ಕೋಟಿ ದೊರೆಯಲಿದೆ.

ರಾಜ್ಯಪಾಲರ ಭತ್ಯೆಯನ್ನು ನಾಲ್ಕು ವರ್ಷಗಳ ಬಳಿಕ ಏರಿಸಲಾಗಿದೆ. ರಾಜ್ಯಪಾಲರ ವೇತನ ಮತ್ತು ಭತ್ಯೆಗಳನ್ನು ಆಯಾ ರಾಜ್ಯ ಸರ್ಕಾರಗಳೇ ಪಾವತಿಸಬೇಕು. ರಾಜ್ಯಪಾಲರ ಸಂಬಳವನ್ನು ತಿಂಗಳಿಗೆ ₹3.5 ಲಕ್ಷಕ್ಕೆ ನಾಲ್ಕು ತಿಂಗಳ ಹಿಂದಷ್ಟೇ ಹೆಚ್ಚಿಸಲಾಗಿತ್ತು.

ಗೃಹ ಸಚಿವಾಲಯವು ಹೊರಡಿಸಿರುವ ಅಧಿಸೂಚನೆ ಪ್ರಕಾರ, ತಮಿಳುನಾಡು ರಾಜ್ಯಪಾಲರ ಭತ್ಯೆ ₹1.66 ಕೋಟಿಗೆ ಏರಿಕೆಯಾಗಿದೆ. ತಮಿಳುನಾಡಿನ ಚೆನ್ನೈ ಮತ್ತು ಊಟಿಯಲ್ಲಿ ರಾಜಭವನಗಳಿವೆ. ಹಾಗಾಗಿ ಅವರಿಗೆ ಪೀಠೋಪಕರಣ ನವೀಕರಣ ವೆಚ್ಚವಾಗಿ ₹7.5 ಲಕ್ಷ ಮತ್ತು ರಾಜಭವನಗಳ ನಿರ್ವಹಣೆಗಾಗಿ ₹6.5 ಕೋಟಿ ದೊರೆಯಲಿದೆ.

ಬಿಹಾರದ ರಾಜ್ಯಪಾಲರಿಗೆ ದೊರೆಯುವ ಭತ್ಯೆಯನ್ನು ₹1.62 ಕೋಟಿಗೆ ನಿಗದಿ ಮಾಡಲಾಗಿದೆ. ಪಟ್ನಾದ ರಾಜಭವನ ನಿರ್ವಹಣೆಗಾಗಿ ಅವರು ₹80.2 ಲಕ್ಷ ಪಡೆಯಲಿದ್ದಾರೆ. ಪೀಠೋಪಕರಣ ನವೀಕರಣಕ್ಕೆ ಅವರಿಗೆ ₹65 ಲಕ್ಷ ಸಿಗಲಿದೆ.

ಮಹಾರಾಷ್ಟ್ರವು ಮುಂಬೈ, ಪುಣೆ ಮತ್ತು ನಾಗ್ಪುರಗಳಲ್ಲಿ ಮೂರು ರಾಜಭವನಗಳನ್ನು ಹೊಂದಿದೆ. ಹಾಗಾಗಿ ಅಲ್ಲಿನ ರಾಜ್ಯಪಾಲರಿಗೆ ರಾಜಭವನಗಳ ನಿರ್ವಹಣೆಗೆ ₹1.8 ಕೋಟಿ ದೊರೆಯಲಿದೆ.

ಉತ್ತರ ಪ್ರದೇಶ ರಾಜ್ಯಪಾಲರಿಗೆ ಭತ್ಯೆಯಾಗಿ ₹66 ಲಕ್ಷ ನಿಗದಿಯಾಗಿದ್ದರೆ ಪೀಠೋಪಕರಣ ನವೀಕರಣಕ್ಕೆ ₹10 ಲಕ್ಷ ಸಿಗಲಿದೆ. ರಾಜಭವನ ನಿರ್ವಹಣೆಗೆ ₹3.53 ಕೋಟಿ ಒದಗಿಸಲಾಗುವುದು.

ಗುಜರಾತ್‌ ರಾಜ್ಯಪಾಲರಿಗೆ ಪ್ರವಾಸ ಮತ್ತಿತರ ಭತ್ಯೆಯಾಗಿ ₹55 ಲಕ್ಷ, ಪೀಠೋಪಕರಣ ನವೀಕರಣಕ್ಕೆ ₹15 ಲಕ್ಷ ಮತ್ತು ಗಾಂಧಿನಗರದಲ್ಲಿರುವ ರಾಜಭವನ ನಿರ್ವಹಣೆಗೆ ₹20 ಲಕ್ಷ ನಿಗದಿ ಮಾಡಲಾಗಿದೆ.

ಹೈದರಾಬಾದ್‌ನಲ್ಲಿರುವ ಆಂಧ್ರಪ್ರದೇಶ ರಾಜಭವನದ ನಿರ್ವಹಣೆಗೆ ₹18.3 ಲಕ್ಷ ನೀಡಲು ನಿರ್ಧರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry