ಮೆಟ್ರೊ ಸೇವೆ ಲಭ್ಯ, ಎಂದಿನಂತೆ ಸಂಚಾರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ನೌಕರರ ಸಂಘವು ಇಂದಿನಿಂದ(ಸೋಮವಾರ) ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ. ಆದರೆ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಆರ್ಸಿಎಲ್ ಕ್ರಮ ಕೈಗೊಂಡಿದ್ದು, ಬೆಳಿಗ್ಗೆ ರೈಲುಗಳು ಎಂದಿನಂತೆ ಚಲಿಸುತ್ತಿವೆ.
ಬೆಳಿಗ್ಗೆ 5.30ಕ್ಕೆ ರೈಲುಗಳು ಮೊದಲ ನಿಲ್ದಾಣದಿಂದ ಹೊರಟು ನಾಲ್ಕು ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯ ಇವೆ.
ಕೆಲಸ ನಿಮಿತ್ತ ಕಚೇರಿಗಳಿಗೆ ತೆರಳುವ ಉದ್ಯೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಬಿಎಂಆರ್ಸಿಎಲ್ ಕ್ರಮ ಕೈಗೊಂಡಿದೆ.
ಇಂದು ವಿಚಾರಣೆ
’ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮುಷ್ಕರ ನಡೆಸುವುದಿಲ್ಲ. ಆದರೆ, ಬೇಡಿಕೆಗೆ ಸಂಬಂಧಿಸಿದಂತೆ ಇಂದೇ ಹೈಕೋರ್ಟ್ನಲ್ಲಿ ವಿಚಾರಣೆಯೂ ನಡೆಯಲಿದ್ದು, ಅಲ್ಲಿಯ ಪ್ರಕ್ರಿಯೆಗಳು ಮುಗಿದ ನಂತರ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಗುವುದು’ ಎಂದು ಸೂರ್ಯನಾರಾಯಣ ಅವರು ಭಾನುವಾರ ’ಪ್ರಜಾವಾಣಿ’ಗೆ ತಿಳಿಸಿದ್ದರು.
* ಇದನ್ನೂ ಓದಿ..
* ಈಡೇರುವುದೇ ಮೆಟ್ರೊ ನೌಕರರ ಬೇಡಿಕೆ?
ಬರಹ ಇಷ್ಟವಾಯಿತೆ?
0
0
0
0
0