ಪತಂಜಲಿ ಫುಡ್‌ಪಾರ್ಕ್ ಬೆದರಿಕೆಗೆ ಮಣಿದ ಯೋಗಿ

7

ಪತಂಜಲಿ ಫುಡ್‌ಪಾರ್ಕ್ ಬೆದರಿಕೆಗೆ ಮಣಿದ ಯೋಗಿ

Published:
Updated:
ಪತಂಜಲಿ ಫುಡ್‌ಪಾರ್ಕ್ ಬೆದರಿಕೆಗೆ ಮಣಿದ ಯೋಗಿ

ಲಖನೌ: ಪತಂಜಲಿ ಆಯುರ್ವೇದ ಸಂಸ್ಥೆಯ ₹6,000 ಕೋಟಿ ವೆಚ್ಚದ ಫುಡ್ ಪಾರ್ಕ್ ಸ್ಥಾಪನೆ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಅಸಹಕಾರದಿಂದ ರಾಜ್ಯದಲ್ಲಿ ಯೋಜನೆ ಸ್ಥಗಿತಗೊಳಿಸುವುದಾಗಿ ಸಂಸ್ಥೆ ಬೆದರಿಕೆ ಹಾಕಿದ ಬಳಿಕ ಯೋಗಿ ಈ ಸೂಚನೆ ನೀಡಿದ್ದಾರೆ.

ಸಂಸ್ಥೆಯ ಎಂ.ಡಿ ಆಚಾರ್ಯ ಬಾಲಕೃಷ್ಣ ಅವರ ಜೊತೆ ಯೋಗಿ ಅವರು ಮಾತನಾಡಿದ್ದಾರೆ. ಯೋಜನೆ ರದ್ದುಗೊಂಡಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಯೋಜನೆಗೆ ಭೂಮಿಯನ್ನು ಹಂಚಿಕೆ ಮಾಡಲಾಗಿದ್ದು, ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಪ್ರಧಾನ  ಕಾರ್ಯದರ್ಶಿ ಅವನೀಶ್ ಅವಸ್ಥಿ ಹೇಳಿದ್ದಾರೆ.

ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿ ಪಕ್ಕದ 425 ಎಕರೆಯಲ್ಲಿ ಫುಡ್‌ ಪಾರ್ಕ್ ನಿರ್ಮಾಣಗೊಳ್ಳಲಿದೆ. 

ಪರಿಶೀಲನೆ: ಪ್ರಕ್ರಿಯೆ ತ್ವರಿತಗೊಳಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ್ದು, ನಿರ್ಧಾರವನ್ನು ಪರಿಶೀಲಿಸುವುದಾಗಿ ಪತಂಜಲಿ ಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry