ಮೆದುಳಿನ ತರಂಗಗಳಿಂದ ಪಾಸ್‌ವರ್ಡ್‌!

7

ಮೆದುಳಿನ ತರಂಗಗಳಿಂದ ಪಾಸ್‌ವರ್ಡ್‌!

Published:
Updated:
ಮೆದುಳಿನ ತರಂಗಗಳಿಂದ ಪಾಸ್‌ವರ್ಡ್‌!

ವಾಷಿಂಗ್ಟನ್‌: ಸ್ಮಾರ್ಟ್‌ಫೋನ್‌ ಪಾಸ್‌ವರ್ಡ್‌ಗಳನ್ನು ಹ್ಯಾಕ್‌ ಮಾಡದಂತೆ ತಪ್ಪಿಸಲು ವಿಜ್ಞಾನಿಗಳು ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ, ಮೆದುಳಿನ ತರಂಗಗಳನ್ನೇ ಆಧರಿಸಿ ಪಾಸ್‌ವರ್ಡ್ ನಿಗದಿಪಡಿಸುವ ಈ ವಿಧಾನವನ್ನು ನ್ಯೂಯಾರ್ಕ್‌ನ ಯೂನಿವರ್ಸಿಟಿ ಅಟ್ ಬಫೆಲೋದ (ಯುಬಿ) ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.

‘ಮುಖ ಗುರುತಿಸುವಿಕೆ, ಕಣ್ಣಿನ ಪಾಪೆ, ಬೆರಳಚ್ಚು ಸ್ಕ್ಯಾನ್‌ನಂತಹ ಬಯೊಮೆಟ್ರಿಕ್ ವ್ಯವಸ್ಥೆ ಮೂಲಕ ಸ್ಮಾರ್ಟ್ ಫೋನ್‌ಗಳನ್ನು ಲಾಕ್ ಹಾಗೂ ಅನ್‌ಲಾಕ್ ಮಾಡುವ ವ್ಯವಸ್ಥೆ ಈಗಾಗಲೇ ಇದೆ. ಆದರೆ, ಒಮ್ಮೆ ಇವುಗಳ ದುರ್ಬಳಕೆಯಾದರೆ ಮತ್ತೆ ಅವುಗಳನ್ನು ರೀಸೆಟ್‌ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಬೆರಳಚ್ಚನ್ನಾಗಲೀ ಕಣ್ಣಿನ ಪಾಪೆಯನ್ನಾಗಲೀ ಹೊಸದಾಗಿ ಬೆಳೆಸುವುದು ಅಸಾಧ್ಯ’ ಎಂದು ಸಹಾಯಕ ಪ್ರಾಧ್ಯಾಪಕ ವೆನ್ಯಾವೊ ಕ್ಸು ಹೇಳಿದ್ದಾರೆ.

‘ಅದಕ್ಕಾಗಿಯೇ ಹೊಸ ರೀತಿಯ ಪಾಸ್‌ವರ್ಡ್‌ ವಿಧಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಮೆದುಳಿನ ತರಂಗಗಳನ್ನು ಆಧರಿಸಿ ಒಮ್ಮೆ ಪಾಸ್‌ವರ್ಡ್‌ ನಿಗದಿ ಮಾಡಿದರೆ, ಅಗತ್ಯವಿದ್ದಾಗ ಸುಲಭವಾಗಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ತಿಳಿಸಿದ್ದಾರೆ.

ಈ ಬಗೆಯ ಪಾಸ್‌ವರ್ಡ್‌ ಅಭಿವೃದ್ಧಿಪಡಿಸುವ ಸಂಬಂಧ ಮೊದಲ ಬಾರಿಗೆ ನಡೆಸಿದ ಆಳವಾದ ಸಂಶೋಧನೆ ಇದಾಗಿದೆ. ಬ್ಯಾಂಕಿಂಗ್, ಕಾನೂನು ಜಾರಿ, ವಿಮಾನಯಾನದ ಭದ್ರತೆಗೂ ಈ ಮಾದರಿ ಪಾಸ್‌ವರ್ಡ್‌ ಬಳಕೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry