ಕೈತಪ್ಪಿದ ಸಚಿವ ಸ್ಥಾನ: ಮಾಜಿ ಸಿಎಂ ಮುಂದೆ ಕಣ್ಣೀರು ಹಾಕಿದ ಎಂ.ಬಿ. ಪಾಟೀಲ್

7

ಕೈತಪ್ಪಿದ ಸಚಿವ ಸ್ಥಾನ: ಮಾಜಿ ಸಿಎಂ ಮುಂದೆ ಕಣ್ಣೀರು ಹಾಕಿದ ಎಂ.ಬಿ. ಪಾಟೀಲ್

Published:
Updated:
ಕೈತಪ್ಪಿದ ಸಚಿವ ಸ್ಥಾನ: ಮಾಜಿ ಸಿಎಂ ಮುಂದೆ ಕಣ್ಣೀರು ಹಾಕಿದ ಎಂ.ಬಿ. ಪಾಟೀಲ್

ಬೆಂಗಳೂರು: ಸಂಪುಟ ಸಚಿವ ಸ್ಥಾನದ ಪಟ್ಟಿಯಲ್ಲಿ ಹೆಸರಿದ್ದರೂ ಕೊನೆ ಗಳಿಗೆಯಲ್ಲಿ ತಮ್ಮನ್ನು ಯಾಕೆ ಕೈಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಎಂ.ಬಿ. ಪಾಟೀಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಕಣ್ಣೀರು ಹಾಕಿದ್ದಾರೆ.

ಗುರುವಾರ ಬೆಳಿಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ಬಂದ ಎಂ.ಬಿ. ಪಾಟೀಲ್‌, ಕಣ್ಣೀರು ಹಾಕುತ್ತಲೇ ಭೇಟಿ ಮಾಡಿ ಅಲ್ಲಿಂದ ತೆರಳಿದರು.

ಸಮಾಜಕ್ಕಾಗಿ, ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ನನ್ನನ್ನು ಪಕ್ಷ ಕಡೆಗಣಿಸಿದ್ದು ಎಷ್ಟು ಸರಿ ಎಂದು ಪಾಟೀಲ್‌ ಭಾವೋದ್ವೇಗಕ್ಕೆ ಒಳಗಾದರು.

ಮುಂದುವರಿದ ಅಸಮಾಧಾನ

ಸಚಿವ ಸ್ಥಾನ ತಪ್ಪಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮುಂದುವರಿದಿದೆ. ಎಂ.ಬಿ. ಪಾಟೀಲ್ ನಿವಾಸದಲ್ಲಿ ಪ್ರಮುಖರ ಸಭೆ ನಡೆದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಸಿದ್ದರಾಮಯ್ಯ ನಿವಾಸ ಕಾವೇರಿಗೆ ಪರಿಷತ್ ಸದಸ್ಯ ಧರ್ಮಸೇನ ಭೇಟಿ ನೀಡಿದ್ದಾರೆ. ಬಾಕಿ ಉಳಿಸಿಕೊಂಡಿರುವ 6 ಸ್ಥಾನದಲ್ಲಿ ಅವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ದಲಿತರ ಕೋಟಾದಲ್ಲಿ ತಮಗೆ ಸಚಿವ ಸ್ಥಾನ ನೀಡಬೇಕೆಂದು ಧರ್ಮಸೇನ ಅವರು ಕೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry