ಕೃಷ್ಣಾ ನೀರಿನ ವಿವಾದ: ಪಂಚಾಯ್ತಿಗೆ ಒಪ್ಪಿಸಲು ಪ್ರಧಾನಿ ಸಮ್ಮತಿ

ಬೆಂಗಳೂರು, ಜೂನ್ 8– ಕೃಷ್ಣಾ–ಗೋದಾವರಿ ನೀರು ಹಂಚಿಕೆ ವಿವಾದವನ್ನು ಪಂಚಾಯಿತಿಗೊಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರದ ನೀರಾವರಿ ಮತ್ತು ವಿದ್ಯುಚ್ಛಕ್ತಿ ಮಂತ್ರಿಗೆ ತಾವು ಸೂಚನೆ ನೀಡಿರುವುದಾಗಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿಯವರ ಈ ಸೂಚನೆಯಿಂದ ಮೈಸೂರಿನ ದೀರ್ಘಕಾಲದ ಒತ್ತಾಯಕ್ಕೆ ಪುರಸ್ಕಾರ ದೊರೆತಂತಾಗಿದೆ.

ಸಿರ್ಹಾನ್ ಇರುವ ಜೈಲಿಗೆ ಟೈಪ್‌ರೈಟರಿನಲ್ಲಿ ಪಿಸ್ತೂಲು ಸಾಗಣೆ: ಹೆಂಗಸಿನ ಬಂಧನ

ಲಾಸ್‌ಏಂಜಲಿಸ್, ಜೂನ್ 8– ಸೆನೆಟರ್ ರಾಬರ್ಟ್ ಕೆನೆಡಿಯವರ ಹಂತಕನೆನ್ನಲಾದ 24 ವರ್ಷ ವಯಸ್ಸಿನ ಸಿರ್ಹಾನ್ ಬಿಶಾರಾ ಸಿಹಾನ್‌ನನ್ನು ಬಂಧಿಸಿಟ್ಟಿರುವ ಜೈಲಿಗೆ ಮೂರು ಪಿಸ್ತೂಲುಗಳನ್ನು ಟೈಪ್‌ರೈಟರಿನಲ್ಲಿ ಅಡಗಿಸಿ ಕೊಂಡು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದ 55 ವರ್ಷ ವಯಸ್ಸಿನ ಹೆಂಗಸೊಬ್ಬಳನ್ನು ಬಂಧಿಸಲಾಯಿತು ಎಂದು ನಿನ್ನೆ ರಾತ್ರಿ ಲಾಸ್‌ಏಂಜಲಿಸ್ ಸೆಂಟ್ರಲ್ ಕೌಂಟಿ ಜೈಲಿನ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.