ಗಂಗಾಮತಸ್ಥರ ಸಮಾವೇಶ

7

ಗಂಗಾಮತಸ್ಥರ ಸಮಾವೇಶ

Published:
Updated:

ಮಂಡ್ಯ: ‘ಗಂಗಾಮತಸ್ಥ ಸಮಾಜದ ಅಭಿವೃದ್ಧಿಗಾಗಿ ರಾಜ್ಯಮಟ್ಟದ 3ನೇ ವಿಕಾಸ ಸಮಾವೇಶ ಜೂನ್‌ 10ರಂದು ಮಳವಳ್ಳಿಯ ರಾಮಾರೂಢ ಸ್ವಾಮೀಜಿ ಮಠದಲ್ಲಿ ನಡೆಯಲಿದೆ’ ಎಂದು ಗಂಗಾ ಪರಮೇಶ್ವರಿ ಸಂಘದ ನಿರ್ದೇಶಕ ಮಳವಳ್ಳಿ ಕಂಬರಾಜು ಇಲ್ಲಿ ಶುಕ್ರವಾರ ಹೇಳಿದರು.

‘ಬೆಸ್ತ, ಪರಿವಾರ, ಕೋಲಿ, ಕಬ್ಬಲಿಗ, ಮೊಗವೀರ ಸೇರಿದಂತೆ 39 ಪರ್ಯಾಯ ಹೆಸರುಗಳಿಂದ ಗಂಗಾಮತಸ್ಥರನ್ನು ಗುರುತಿಸಲಾಗುತ್ತದೆ. ಸಮಾಜದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸಮಾವೇಶ ಉತ್ತಮ ವೇದಿಕೆಯಾಗಿದೆ’ ಎಂದು ತಿಳಿಸಿದರು.

‘ಗಂಗಾಮತಸ್ಥ ಸಮಾಜದ ಪರಮ ರಾಮಾರೂಢ ಸ್ವಾಮೀಜಿ, ಜೇವರ್ಗಿಯ ಮಲ್ಲಣ್ಣಪ್ಪ ಸ್ವಾಮೀಜಿ, ಹಾವೇರಿಯ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಮಾವೇಶದ ಸಾನ್ನಿಧ್ಯ ವಹಿಸುವರು. ಶಾಸಕರಾದ ಲಾಲಾಜಿ ಆರ್‌.ಮೆಂಡನ್‌, ಬಿ.ನಾರಾಯಣರಾವ್, ಅನಿಲ್‌ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಸಮಾವೇಶದಲ್ಲಿ ಭಾಗವಹಿಸುವರು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry