ಸೋಮವಾರ, ಡಿಸೆಂಬರ್ 9, 2019
24 °C

ಮಲಿನಗೊಂಡ ಅಂಜನಾಪುರ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲಿನಗೊಂಡ ಅಂಜನಾಪುರ ಕೆರೆ

ಬೆಂಗಳೂರು: ನಗರದ ಹೊರವಲಯದ ಅಂಜನಾಪುರ ಕೆರೆ ಮಾಲಿನ್ಯದಿಂದ ತುಂಬಿದೆ. ಕೆರೆಯ ಅಂಗಳ ಬಹುತೇಕ ಒತ್ತುವರಿಗೂ ಒಳಗಾಗಿದ್ದು ಜಲಮೂಲ ಮುಚ್ಚಿ ಹೋಗುವ ಆತಂಕ ಎದುರಾಗಿದೆ.

ಸುತ್ತಮುತ್ತಲ ತ್ಯಾಜ್ಯ, ಕೈಗಾರಿಕೆಗಳ ಮಲಿನ ನೀರು ಕೆರೆ ಸೇರುತ್ತಿದೆ. ಪಾಚಿ, ಜೊಂಡು ಹುಲ್ಲು ಆವರಿಸಿದೆ. ಇದೇ ಪ್ರದೇಶವನ್ನು ಸ್ಥಳೀಯರು ಬಯಲು ಶೌಚಕ್ಕೂ ಬಳಸುತ್ತಿದ್ದಾರೆ.

ಅಂಜನಾಪುರ ವ್ಯಾಪ್ತಿಯ ಕೆರೆಯಿದು. ಆದರೆ. ಇದರ ಬಗ್ಗೆ ಕೇಳಿದರೆ ಸ್ಥಳೀಯರಿಗೇ ಮಾಹಿತಿ ಇರಲಿಲ್ಲ. ಸುತ್ತ ಪುಟ್ಟ ಗುಡ್ಡಗಳಿಂದ ಆವೃತವಾಗಿದೆ. ನೀರಿನ ಒಳಹರಿವಿಗೆ ನಿಸರ್ಗ ಸಹಜ ವ್ಯವಸ್ಥೆ ಇಲ್ಲಿದೆ.

ಅಂಜನಾಪುರ ಊರು ಪ್ರವೇಶಿಸುತ್ತಿದ್ದಂತೆಯೇ ಮುಖ್ಯ ರಸ್ತೆಯ ಎಡಭಾಗದಲ್ಲಿರುವ ಆವಲಹಳ್ಳಿ ಕೆರೆಯೂ ಮಾಲಿನ್ಯಕ್ಕೆ ಒಳಗಾಗಿದೆ. ಜನರು ಕಸ ಕಡ್ಡಿ ಎಸೆಯುವ ತಾಣವಾಗಿದೆ. ಇದೇ ಕೆರೆಗೆ ಹೊಂದಿಕೊಂಡಂತೆ ಕೆಲವು ದೇವಸ್ಥಾನಗಳೂ ಇವೆ. ಕೆರೆಯ ಪಶ್ಚಿಮ ಪಾರ್ಶ್ವದಲ್ಲಿ ಕುಡಿಯುವ ನೀರಿನ ಬಳಕೆಯ ಬಾವಿಯೂ ಇದೆ.

'ಕೆರೆ ಇಲ್ಲಿನ ಅಂತರ್ಜಲ ಹೆಚ್ಚಿಸಿದೆ. ಹೂಳು ತೆಗೆದು ಸಂರಕ್ಷಿಸಿದರೆ ಇನ್ನಷ್ಟು ನೀರು ಸಂಗ್ರಹ ಆಗುತ್ತದೆ. ಮಾತ್ರವಲ್ಲ ಸುಂದರ ನಿಸರ್ಗ ತಾಣ ನಿರ್ಮಾಣವಾಗುತ್ತದೆ' ಎಂದು ಇಲ್ಲಿನ ರಿಕ್ಷಾ ಚಾಲಕ ಮಹಮದ್ ಹೇಳಿದರು.

ಪ್ರತಿಕ್ರಿಯಿಸಿ (+)