ಅಂತಿಮ ಹಂತಕ್ಕೆ ಎಂಟು ಪ್ರಾಜೆಕ್ಟ್‌ ಆಯ್ಕೆ

7
ಕೆಎಸ್‌ಸಿಎಸ್‌ಟಿ ಸ್ಪರ್ಧೆಯ 41ನೇ ಆವೃತ್ತಿ: ಆಗಸ್ಟ್‌ನಲ್ಲಿ ರಾಜ್ಯಮಟ್ಟದ ಸ್ಪರ್ಧೆ

ಅಂತಿಮ ಹಂತಕ್ಕೆ ಎಂಟು ಪ್ರಾಜೆಕ್ಟ್‌ ಆಯ್ಕೆ

Published:
Updated:

ನಿಪ್ಪಾಣಿ: ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು (ಕೆಎಸ್‌ಸಿಎಸ್‌ಟಿ)ಯು ಆಯೋಜಿಸಿರುವ 41ನೇ ಆವೃತ್ತಿಯ ಸ್ಟೂಡೆಂಟ್ ಪ್ರಾಜೆಕ್ಟ್‌ ಪ್ರೋಗ್ರಾಂಗೆ ಸ್ಥಳೀಯ ವಿ.ಎಸ್.ಎಂ.ದ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಶಿಕ್ಷಣ ಸಂಸ್ಥೆಯ (ವಿಎಸ್ಎಂಎಸ್ಆರ್‌ಕೆಐಟಿ)ಯ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ಎಂಟು ಪ್ರಾಜೆಕ್ಟ್‌ಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿವೆ.

ಸೆಮಿನಾರ್ ವಿಭಾಗದ 2, ಪ್ರದರ್ಶನ ವಿಭಾಗದ 4 ಹಾಗೂ ಹೆಚ್ಚಿನ ಅಭಿವೃದ್ಧಿ ವಿಭಾಗದ 2 ಪ್ರಾಜೆಕ್ಟ್‌ಗಳು ಇದರಲ್ಲಿ ಸೇರಿವೆ. ಮೆಕ್ಯಾನಿಕಲ್ ವಿಭಾಗದ ಪ್ರೊ. ಅಮರ ನವಲಿಹಾಳಕರ ಮಾರ್ಗದರ್ಶನದಲ್ಲಿ ತುಷಾರ್ ಕಮತೆ ನಾಯಕತ್ವದ ತಂಡ ‘ಸ್ಮಾರ್ಟ್ ಅರೆಕಾನಟ್ ಫಾರ್ಮಿಂಗ್ ಅಂಡ್‌ ಹಾರ್ವೆಸ್ಟಿಂಗ್ ರೊಬೋಟ್ ಮಶೀನ್’, ಪ್ರೊ. ಮಹಾದೇವ ಹರಕುಡೆ ಮಾರ್ಗದರ್ಶನದಲ್ಲಿ ಆಕಾಶ್‌ ದೇಶಪಾಂಡೆ ನೇತೃತ್ವದ ‘ಡಿಜೈನ್-ಆಪ್ಟಿಮೈಜೆಶನ್ ಅಂಡ್‌ ಡೆವಲಪ್‌ಮೆಂಟ್ ಆಫ್ ರೋಬಸ್ಟ್ ಮಲ್ಟಿಪರ್ಪಜ್ ಕಟಿಂಗ್ ಮಶೀನ್ ಫಾರ್ ಅಗ್ರಿಕಲ್ಚರಲ್ ಯೂಸೇಜ್’ ಪ್ರೊಜೆಕ್ಟ್‌ಗಳು ಅವುಗಳಲ್ಲಿ ಪ್ರಮುಖವಾದವು.

ದಾವಣಗೆರೆಯ ಬಾಪುಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಾಜಿ ಸಂಸ್ಥೆಯಲ್ಲಿ ಇದೇ ಆಗಸ್ಟ್ 10 ಮತ್ತು 11ರಂದು ಈ ರಾಜ್ಯಮಟ್ಟದ ಅಂತಿಮ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಲಿದೆ. ಸಂಸ್ಥೆಯ ಪ್ರಾಚಾರ್ಯ ಡಾ. ಪ್ರಕಾಶ್ ಹುಬ್ಬಳ್ಳಿ, ಎಸ್‌ಪಿಪಿ ಸಂಯೋಜಕ

ಪ್ರೊ. ಎಂ.ಸಿ. ಸರಸಾಂಬಾ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry