7

‘ಸಂಜು’ ಚಿತ್ರದ ಮೊದಲ ಹಾಡು ಬಿಡುಗಡೆ: 14 ಲಕ್ಷ ಜನ ವೀಕ್ಷಣೆ

Published:
Updated:

ಬಾಲಿವುಡ್‌ ನಟ ಸಂಜಯ್‌ ದತ್‌ ಜೀವನ ಕತೆಯಧಾರಿಸಿದ ‘ಸಂಜು’ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ಈ ಚಿತ್ರದಲ್ಲಿ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ಅವರು ಸಂಜಯ್‌ ಜೀವನದ ಯಾವ ಯಾವ ಅಂಶಗಳು ತೆರೆ ಮೇಲೆ ತೋರಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.  

ಚಿತ್ರದ ಪೋಸ್ಟರ್‌ ಹಾಗೂ ಟ್ರೇಲರ್‌ಗಳು ಬಿಡುಗಡೆಯಾಗಿದ್ದು, ಅವೂ ಸಹ ನಿರೀಕ್ಷೆಯನ್ನು ಹೆಚ್ಚು ಮಾಡಿತ್ತು.

ಈಗ ಈ ಚಿತ್ರದ ಕರ್‌ ಕರ್‌ ಮೈದಾನ್‌ ಫತ್ತೆ’ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಸುಖ್ವಿಂದರ್‌ ಸಿಂಗ್‌ ಹಾಗೂ ಶ್ರೇಯಾ ಘೋಷಾಲ್‌ ಹಾಡಿದ್ದಾರೆ. ಈ ಹಾಡಿನಲ್ಲಿ ಡ್ರಗ್‌ ಅಡಿಕ್ಟ್‌ ಆದ ಸಂಜಯ್‌ ದತ್‌ ಅದರಿಂದ ಹೊರಬರಲು ಹೋರಾಟ ನಡೆಸುತ್ತಿರುವ ದೃಶ್ಯಾವಳಿಗಳನ್ನು ತೋರಿಸಲಾಗಿದೆ. ಸಂಜಯ್‌ನ ಗಟ್ಟಿ ನಿರ್ಧಾರವನ್ನು ಈ ಹಾಡಿನಲ್ಲಿ ಸ್ಪೂರ್ತಿದಾಯಕವಾಗಿ ತೋರಿಸಲಾಗಿದೆ. ಈ ಹಾಡನ್ನು 14 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. 

ಈ ಹಾಡಿನಲ್ಲಿ ಸಂಜಯ್‌ ದತ್‌ ಸಿನಿಮಾನಾಯಕನಾಗುವುದು, ಸ್ಟಾರ್‌ ಪಟ್ಟ ಗಿಟ್ಟಿಸಿಕೊಳ್ಳುವುದು, ಜೈಲು ಸೇರುವುದು ಮೊದಲಾದಗಳ ದೃಶ್ಯಗಳು ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹೆಚ್ಚು ಮಾಡುತ್ತವೆ. ಕೆಲ ದೃಶ್ಯಗಳಲ್ಲಿ ಸಂಜಯ್‌ ದತ್‌ ಅಭಿನಯದ ಸಿನಿಮಾ ದೃಶ್ಯಗಳನ್ನೇ ಬಳಸಲಾಗಿದೆ. ಸಂಜಯ್‌ ಪಾತ್ರದಲ್ಲಿ ರಣಬೀರ್‌ ಅಭಿನಯ ಮನೋಜ್ಞವಾಗಿದೆ.

ಈ ಚಿತ್ರ ಜೂನ್‌ 29ರಂದು ಬಿಡುಗಡೆಯಾಗಲಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !