ಸೊಳ್ಳೆ ನಿಯಂತ್ರಣಕ್ಕೆ ನಗರಸಭೆ ಸಜ್ಜು

7
ನಗರದಲ್ಲಿ ಸೊಳ್ಳೆ ನಿಯಂತ್ರಣಕ್ಕೆ 20 ಫಾಗಿಂಗ್ ಯಂತ್ರಗಳ ಖರೀದಿ

ಸೊಳ್ಳೆ ನಿಯಂತ್ರಣಕ್ಕೆ ನಗರಸಭೆ ಸಜ್ಜು

Published:
Updated:

ರಾಯಚೂರು: ನಗರದಲ್ಲಿ ಸೊಳ್ಳೆಗಳ ನಿಯಂತ್ರಣ ಮಾಡಲು ಮುಂದಾಗಿರುವ ನಗರಸಭೆಯು 20 ಫಾಗಿಂಗ್ ಯಂತ್ರಗಳನ್ನು ಖರೀದಿಸಿದೆ.

ಎಲ್ಲ ಬಡಾವಣೆಗಳಲ್ಲಿ ಫಾಗಿಂಗ್ ಮಾಡಿಸಲು ನಗರಸಭೆ ಯೋಜನೆ ಸಿದ್ಧಪಡಿಸಿದ್ದು, ಇದರ ಹೊಣೆಯನ್ನು ಪರಿಸರ ಎಂಜಿನಿಯರ್‌ಗೆ ವಹಿಸಲಾಗಿದೆ. ನಗರವನ್ನು ಹತ್ತು ಸರ್ಕಲ್‌ಗಳಾಗಿ ವಿಂಗಡಿಸಿದ್ದು, ಮೊದಲ ಹಂತದಲ್ಲಿ 10 ಫಾಗಿಂಗ್‌ ಯಂತ್ರಗಳನ್ನು ಬಳಕೆ ಮಾಡಿ ಫಾಗಿಂಗ್‌ ಮಾಡಿಸಲಾಗುತ್ತಿದೆ. ಸೊಳ್ಳೆಗಳ ನಿಯಂತ್ರಣ ಆಗದಿದ್ದರೆ ಮತ್ತು ಅಗತ್ಯ ಕಂಡುಬಂದರೆ ಇನ್ನುಳಿದ ಫಾಗಿಂಗ್‌ ಯಂತ್ರಗಳ ಬಳಸಲು ಯೋಚಿಸಲಾಗಿದೆ.

ನಗರದ ಮಾವಿನ ಕೆರೆ ಹಾಗೂ ಕೆರೆಯ ಸುತ್ತುಮುತ್ತಲಿನ ಪ್ರದೇಶ ಸೇರಿದಂತೆ ನಗರದ ಹಲವೆಡೆ ಕಲುಷಿತ ನೀರಿನ ಶೇಖರಣೆ ಆಗಿರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ಒದಗಿದಂತಾಗಿದೆ. ಪ್ರಮುಖವಾಗಿ ನಗರದಲ್ಲಿನ ಚರಂಡಿಗಳಲ್ಲಿ ಹಾಗೂ ರಾಜಕಾಲುವೆಗಳಲ್ಲಿ ಕೊಳಚೆ ನೀರು ಹರಿದು ಹೋಗದಿರುವುದರಿಂದ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತಿವೆ.

ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹಾಗೂ ಡೆಂಗಿ ಜ್ವರ ದಂತಹ ಗಂಭೀರ ರೋಗಗಳು ಬರುವ ಸಾಧ್ಯತೆಗಳು ಇರುವುದರಿಂದ ಚರಂಡಿಗಳ ಸ್ವಚ್ಚತೆ ಹಾಗೂ ಫಾಗಿಂಗ್‌ ಕ್ರಮ ಜರುಗಿಸಲು ನಗರಸಭೆಗೆ ಆರೋಗ್ಯ ಇಲಾಖೆಯು ಸೂಚನೆ ನೀಡಿದೆ.

‘ಯಾವುದೇ ರೀತಿಯ ಜ್ವರದ ಪ್ರಕರಣಗಳು ಬಡಾವಣೆಗಳಲ್ಲಿ ಕಂಡುಬಂದರೆ ಮಾಹಿತಿ ನೀಡುವಂತೆ ಆಶಾ ಕಾರ್ಯಕರ್ತರಿಗೂ ಸೂಚಿಸ ಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಹಾಗೂ ರಿಮ್ಸ್‌ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಒದಗಿಸಲು ನೀಡಲು ಕ್ರಮ ವಹಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಾಕೀರ್ ತಿಳಿಸಿದರು.

ಫಾಗಿಂಗ್‌ ಯಂತ್ರಗಳ ಖರೀದಿಗಾಗಿ ₹ 8 ಲಕ್ಷದ ಇ–ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಫಾಗಿಂಗ್‌ ಯಂತ್ರಗಳನ್ನು, ನಗರಸಭೆಯ ಸಂಗ್ರಹಗಾರದಲ್ಲಿ ಇಡಲಾಗಿದೆ.

‘ಸೊಳ್ಳೆ ಹಾವಳಿ ಕಡಿಮೆ ಮಾಡುವುದಕ್ಕೆ ಫಾಗಿಂಗ್‌ ಯಂತ್ರಗಳ ಅಗತ್ಯ ತುಂಬಾ ಇದೆ. ಶೀಘ್ರದಲ್ಲೆ ಫಾಗಿಂಗ್‌ ಮಾಡಿಸುವ ಕೆಲಸ ಆರಂಭಿಸಲಾಗುವುದು’ ಎಂದು ನಗರ ಸಭೆ ಪೌರಾಯುಕ್ತ ರಮೇಶ ನಾಯಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದರಿಂದ ಹಾಗೂ ತಂಪಾದ ವಾತಾವರಣದಿಂದ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿರುತ್ತದೆ

  ಡಾ.ಶಾಕೀರ, ತಾಲ್ಲೂಕು ಆರೋಗ್ಯ ಅಧಿಕಾರಿ

–ಪಿ.ಹನುಮಂತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry