ರೋಮ್‌ನಲ್ಲೊಂದು ವಿಶಿಷ್ಟ ಚರ್ಚ್ ಇದೆ. ‘ಕಪ್ಪುಚಿನಿ ಚರ್ಚ್’ ಎಂದು ಕರೆಯಲಾಗುವ ಈ ಚರ್ಚ್ ವಿಶೇಷವೆಂದರೆ ಇಲ್ಲಿ ಒಳಾಂಗಣ ಅಲಂಕಾರಕ್ಕಾಗಿ ಬರೀ ಮಾನವನ ಮೂಳೆಗಳು ಹಾಗೂ ತಲೆಬುರುಡೆಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.

ಚರ್ಚ್‌ನ ಒಳಭಾಗವನ್ನು ಪೂರ್ತಿ ಮೂಳೆ ಹಾಗೂ ತಲೆಬುರುಡೆಗಳಿಂದ ಆಕರ್ಷಕವಾಗಿ, ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಚರ್ಚ್‌ನ ಒಳಗೆ ಕಾಲಿಟ್ಟಾಗ ಒಂದು ಬಾರಿ ಮೈ ಜುಮ್ ಎಂದರೂ ಮತ್ತೊಂದು ಕ್ಷಣದಲ್ಲಿ ವಿನ್ಯಾಸ ಹಾಗೂ ಅಲಂಕಾರದಿಂದ ಇಷ್ಟವಾಗುತ್ತದೆ. ಇಲ್ಲಿ ಒಟ್ಟು 4000ಕ್ಕಿಂತಲೂ ಹೆಚ್ಚು ಮಾನವನ ಅಸ್ಥಿಪಂಜರಗಳನ್ನು ಬಳಸಲಾಗಿದ್ದು, ಬಗೆ ಬಗೆಯಾಗಿ ವಿನ್ಯಾಸ ಮಾಡಿದ್ದಾರೆ.

ಹೊರಗಿನಿಂದ ನೋಡಲು ಈ ಚರ್ಚ್ ಸಾಮಾನ್ಯ ಚರ್ಚ್‌ನಂತೆ ಕಾಣುತ್ತಿದೆ. ಒಳಾಂಗಣ ವಿನ್ಯಾಸವೇ ಇಲ್ಲಿ ಪ್ರಧಾನ. ಈ ಚರ್ಚ್ ವಿನ್ಯಾಸ ಮಾಡಿದವರು ಆಂಟಾನಿಯೊ ಕ್ಯಾಸಿನೊ. 1631ರಲ್ಲಿ ಈ ಚರ್ಚ್ ಕಟ್ಟುವ ಕೆಲಸವನ್ನು ಮುಗಿಸಿದರು. 17ನೇ ಶತಮಾನದಲ್ಲಿ ಅನೇಕ ಸಂತರು ಇಲ್ಲಿ ಕೈಯಲ್ಲಿ ಅಸ್ಥಿಪಂಜರ ಇಟ್ಟುಕೊಂಡು ಧ್ಯಾನ ಮಾಡುತ್ತಿದ್ದಾರಂತೆ. ಹೀಗಾಗಿ ಅಸ್ಥಿ ಪಂಜರಗಳಿಂದ ಈ ಚರ್ಚ್ ಕಟ್ಟಿರಬಹುದು ಎನ್ನಲಾಗಿದೆ.

ಚರ್ಚ್ ಒಳಹೊಕ್ಕ ಕೂಡಲೇ ಅಲ್ಲಿರುವ ಬೋರ್ಡ್‌ನಲ್ಲಿ ’ಈಗ ನೀವೇನಾಗಿದ್ದೀರೋ, ಆಗ ನಾವು ಅದೇ ಸ್ಥಿತಿಯಲ್ಲಿದ್ದೇವು. ನಾವು ಈಗ ಏನಾಗಿದ್ದೇವೂ, ಮುಂದೆ ನೀವೂ ಹೀಗೆ’ ಎಂಬ ಬರಹ ಕಾಣಿಸುತ್ತದೆ. ದೇವರ ನಂಬಿಕೆ, ಮನುಷ್ಯನ ಅತಿಯಾಸೆ, ವೈರಾಗ್ಯವನ್ನು ಈ ವಾಕ್ಯ ಸಂಕೇತಿಸುತ್ತದೆ. ಈ ಚರ್ಚ್ ರೋಮ್‌ನ ಆಕರ್ಷಕ ಪ್ರವಾಸಿ ಕೇಂದ್ರವೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.