ಮುರುಘಾ ಶರಣರು ಗುಣಮುಖ

7
ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ

ಮುರುಘಾ ಶರಣರು ಗುಣಮುಖ

Published:
Updated:
ಮುರುಘಾ ಶರಣರು ಗುಣಮುಖ

ಚಿತ್ರದುರ್ಗ: ಅನಾರೋಗ್ಯದಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಶಿವಮೂರ್ತಿ ಮುರುಘಾ ಶರಣರು ಗುಣಮುಖರಾಗಿ ಮುರುಘಾಮಠಕ್ಕೆ ಸೋಮವಾರ ಮರಳಿದ್ದಾರೆ.

ಶ್ರೀಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇಲ್ಲಿನ ವೈದ್ಯರು ಎದೆ ತಪಾಸಣೆ ನಡೆಸಿದಾಗ ನಿಮಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದ್ದು, ಚಿಕಿತ್ಸೆ ಅಗತ್ಯ ಎಂದು ಹೇಳಿದ್ದರು. ಅದಕ್ಕಾಗಿ ಕಳೆದ 8ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದೆ’ ಎಂದರು.

‘ಚಿಕಿತ್ಸೆ ವೇಳೆ ಗಂಟಲು ಸೋಂಕು ಇರುವುದು ಕಂಡು ಬಂದಿದ್ದು, ಅಲ್ಲಿನ ನುರಿತ ವೈದ್ಯರ ತಂಡ ತಪಾಸಣೆ ನಡೆಸಿ,  ಔಷಧೋಪಚಾರ ನೀಡುವ ಮೂಲಕ ಉತ್ತಮ ಚಿಕಿತ್ಸೆ ನೀಡಿದ್ದಾರೆ. ‘ನೀವು ಗುಣಮುಖರಾಗಿದ್ದೀರಿ’ ಎಂದು ಹೇಳಿದ ನಂತರ ಶ್ರೀಮಠಕ್ಕೆ ಬಂದಿದ್ದೇವೆ’ ಎಂದರು.

‘ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಈಗ ಆರೋಗ್ಯದಲ್ಲಿ ಯಾವ ಸಮಸ್ಯೆ ಇಲ್ಲ. ಭಕ್ತರು, ಅನುಯಾಯಿಗಳು ಆತಂಕ ಪಡುವ ಅಗತ್ಯವಿಲ್ಲ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry