ಅನ್ನದ ಅಗಳು ಸಿಲುಕಿ ಮಗು ಸಾವು

7

ಅನ್ನದ ಅಗಳು ಸಿಲುಕಿ ಮಗು ಸಾವು

Published:
Updated:

ಬೆಂಗಳೂರು: ಊಟ ಮಾಡುತ್ತಿದ್ದ ವೇಳೆ ಅನ್ನದ ಅಗಳು ಅನ್ನನಾಳದಲ್ಲಿ ಸಿಲುಕಿದ್ದರಿಂದ ಉಸಿರುಗಟ್ಟಿ ಮೂರು ವರ್ಷದ ಪೂರವ್‌ ಪಟೇಲ್‌ ಎಂಬಾತ ಮೃತಪಟ್ಟಿದ್ದಾನೆ.

ಆತ, ಪ್ಲೈವುಡ್‌ ವ್ಯಾಪಾರಿ ದೀಪಕ್‌ ಪಟೇಲ್‌ ಹಾಗೂ ಜಾಗೃತಿ ದಂಪತಿಯ ಪುತ್ರ. ಗುಜರಾತಿನ ದೀಪಕ್‌, ವ್ಯಾಪಾರಕ್ಕಾಗಿ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದಾರೆ. ಬಾಗಲಗುಂಟೆ ಬಳಿಯ ಹಾವನೂರು ಲೇಔಟ್‌ನಲ್ಲಿ ವಾಸವಿದ್ದಾರೆ.

ಭಾನುವಾರ ಮಧ್ಯಾಹ್ನ ಪೂರವ್‌ ಊಟ ಮಾಡುತ್ತಿದ್ದ. ಅದೇ ವೇಳೆ ಅನ್ನದ ಅಗಳು ಆತನ ಅನ್ನನಾಳದಲ್ಲಿ ಸಿಲುಕಿತ್ತು. ಬಳಿಕ, ಉಸಿರಾಡಲು ತೊಂದರೆಯಾಗಿ ಅಳಲಾರಂಭಿಸಿದ್ದ. ನಂತರ, ಆತನ ಪ್ರಜ್ಞೆ ತಪ್ಪಿತ್ತು. ಅದನ್ನು ನೋಡಿದ ಪೋಷಕರು ಆತನನ್ನು ಪೀಪಲ್ ಟ್ರೀ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಾರ್ಗಮಧ್ಯೆಯೇ ಆತ ಮೃತಪಟ್ಟಿರುವುದಾಗಿ ಹೇಳಿದರು ಎಂದು ಬಾಗಲಗುಂಟೆ ಪೊಲೀಸರು ಹೇಳಿದರು.

‘ಅನ್ನದ ಅಗಳು ಸರಿಯಾಗಿ ಬೆಂದಿರಲಿಲ್ಲ. ಅದನ್ನೇ ಮಗು ಸೇವಿಸಿದೆ. ಚಿಕ್ಕದಾದ ಅನ್ನನಾಳದಲ್ಲಿ ಅಗಳು ಸಿಲುಕಿ ನೆತ್ತಿಗೆ ಹತ್ತಿದೆ. ಕೆಮ್ಮಿದರೂ ಅಗಳು ಹೊರಗೆ ಬಂದಿಲ್ಲ. ಉಸಿರಾಟಕ್ಕೆ ತೊಂದರೆ ಆಗಿದ್ದರಿಂದಲೇ ಮಗು ಮೃತಪಟ್ಟಿದೆ’ ಎಂದು ವೈದ್ಯರು ಹೇಳಿರುವುದಾಗಿ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry