14ರಂದು ಶೆಳ್ಳಗಿ ಗ್ರಾ.ಪಂ ಚುನಾವಣೆ

7
ನೂತನ ಗ್ರಾಮ ಪಂಚಾಯಿತಿಯಾಗಿ ಅಸ್ತಿತ್ವಕ್ಕೆ

14ರಂದು ಶೆಳ್ಳಗಿ ಗ್ರಾ.ಪಂ ಚುನಾವಣೆ

Published:
Updated:

ಕಾಳಗಿ: ತಾಲ್ಲೂಕಿನ ಕಂದಗೂಳ ಗ್ರಾಮ ಪಂಚಾಯಿತಿಯಿಂದ ಬೇರ್ಪಟ್ಟು ಹೊಸ ಗ್ರಾಮ ಪಂಚಾಯಿತಿ ಪಟ್ಟಕ್ಕಾಗಿ ಶೆಳ್ಳಗಿ ಮತ್ತು ಹೇರೂರ (ಕೆ.) ಗ್ರಾಮಸ್ಥರ ನಡುವೆ ನ್ಯಾಯಾಲಯದಲ್ಲಿ ಮೂರು ವರ್ಷಗಳಿಂದ ನಿರಂತರವಾಗಿ ನಡೆದಿದ್ದ ಸಮರದಲ್ಲಿ ‘ಶೆಳ್ಳಗಿ’ ಕೊನೆಗೂ ನೂತನ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿ ರಚನೆಗೊಂಡಿದೆ.

ಈ ಹೊಸ ಪಂಚಾಯಿತಿಗೆ ಮೊದಲ ಚುನಾವಣೆ ಘೋಷಣೆಯಾಗಿದ್ದು ಜೂನ್.14ರಂದು ಮತದಾನ ನಡೆಯಲಿದೆ. ಶೆಳ್ಳಗಿ, ಹೇರೂರ (ಕೆ.) ಮತ್ತು ಈ ಮೊದಲು ಚಿಂಚೋಳಿ (ಎಚ್‌.) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕಲ್ಲಹಿಪ್ಪರಗಾ ಊರು ಈಗ ಶೆಳ್ಳಗಿ ನೂತನ ಗ್ರಾಮ ಪಂಚಾಯಿತಿಗೆ ಸೇರಿಕೊಂಡಿವೆ.

ಮೂರು ಗ್ರಾಮಗಳಲ್ಲಿ ತಲಾ ಒಂದೊಂದೇ ವಾರ್ಡ್ ಇದ್ದು ಒಟ್ಟು ಒಂಬತ್ತು ಸದಸ್ಯರ ಸ್ಥಾನಗಳಿವೆ. ಶೆಳ್ಳಗಿ ಗ್ರಾಮದ ಎರಡು ಸದಸ್ಯರ ಸ್ಥಾನಕ್ಕೆ ಅಯ್ಯುಬಮಿಯಾ, ಭಾಗ್ಯಜ್ಯೋತಿ ಕಾಶಿನಾಥ ವರನಾಳ, ಲಕ್ಷ್ಮೀಕಾಂತ ಶಿವರಾಯ ಪಟ್ಟಣ, ಶಶಿಕಲಾ ಗಾಪನೂರ ಸೇರಿ ಒಟ್ಟು ನಾಲ್ವರು ಅಂತಿಮ ಕಣದಲ್ಲಿದ್ದಾರೆ.

ಹೇರೂರ (ಕೆ.) ಗ್ರಾಮದ ಮೂರು ಸದಸ್ಯರ ಸ್ಥಾನಕ್ಕೆ ನಾಗೇಶ ಅಂಕಲಗಿ, ಪ್ರಭಾವತಿ ಬಂಗರಗಿ, ಶಂಕರರಾವ ಬಡಿಗೇರ, ಶಾಮರಾವ ಮಲ್ಲೇಶಪ್ಪ ಭೂಪಾಲ, ಸಂಜೀವಕುಮಾರ ಜಮಾದಾರ, ಸರಸ್ವತಿ ತಳವಾರ ಒಳಗೊಂಡು ಒಟ್ಟು ಆರು ಜನ ಅಭ್ಯರ್ಥಿಗಳು

ಸ್ಪರ್ಧಿಸಿದ್ದಾರೆ.

ಕಲ್ಲಹಿಪ್ಪರಗಾ ಗ್ರಾಮದ ನಾಲ್ಕು ಸದಸ್ಯರ ಸ್ಥಾನಕ್ಕೆ ಅಬ್ದುಲ ರಶೀದಖಾನ ಪಠಾಣ, ಅಂಬವ್ವ ಪೂಜಾರಿ, ಗುರುಪಾದ ಮಾಲಿಪಾಟೀಲ, ಗೌಡಪ್ಪ ಶೆಂಕರೆಪ್ಪ ಪಾಟೀಲ, ತಾರಾಬಾಯಿ ರಾಜಶೇಖರ, ನೀಲಮ್ಮ ಬಾಬು ಹೇರೂರ, ಬೀಬೀ ಸೈಯದ್‌ ಅಕ್ರಮ ಮುಲ್ಲಾ, ಭಾಗ್ಯಶ್ರೀ ಗೌಡಪ್ಪ, ಮಲಕಮ್ಮ ಸಿಂಗೆ, ರಾಜೇಶ್ರೀ ಬಜಂತ್ರಿ, ವಾಜೀದಖಾನ ಪಠಾಣ, ಶಾಂತಕುಮಾರಿ ಗವಾರ, ಸಂಗಮ್ಮ ದೇವಿಂದ್ರಪ್ಪ ತಳವಾರ, ಸಂಗಯ್ಯ ಶಂಕರಯ್ಯ, ಸಾಹೇಬಿ ಮುಲ್ಲಾ, ಸುನೀತಾ ಹುಳಗೇರಾ ಸೇರಿದಂತೆ ಒಟ್ಟು ಹದಿನಾರು ಜನರು ಕಣದಲ್ಲಿದ್ದಾರೆ.

ಹೀಗೆ ಒಟ್ಟು 9 ಸ್ಥಾನಗಳಿಗೆ 26 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

‘ಶೆಳ್ಳಗಿ ಗ್ರಾಮದ 432 ಪುರುಷರು, 404 ಮಹಿಳೆಯರು. ಹೇರೂರ (ಕೆ.) ಗ್ರಾಮದ 505 ಪುರುಷರು, 486 ಮಹಿಳೆಯರು ಮತ್ತು ಕಲ್ಲಹಿಪ್ಪರಗಾ ಗ್ರಾಮದ 628 ಪುರುಷರು, 570 ಮಹಿಳೆಯರು ಸೇರಿ ಒಟ್ಟು 3025 ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಜೂ.17ರಂದು ಮತ ಎಣಿಕೆ ನಡೆಯಲಿದೆ’ ಎಂದು ಚುನಾವಣಾ ಅಧಿಕಾರಿ ರಾಜಶೇಖರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry