ಗುರುವಾರ , ಜುಲೈ 7, 2022
20 °C

‘ಇನ್‌ಸ್ಟಾಗ್ರಾಂ’ ನಾಯಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇನ್‌ಸ್ಟಾಗ್ರಾಂ’ ನಾಯಕಿ

ಈಗ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯಗೊಂಡು ಸಿನಿಮಾ, ಕಿರುತೆರೆ ಪ್ರವೇಶಿಸುತ್ತಿರುವವರ ಸಾಲಿಗೆ ನಟಿ ಮಾಳವಿಕಾ ಶರ್ಮಾ ಅವರು ಹೊಸ ಸೇರ್ಪಡೆ. ‘ನೆಲ ಟಿಕೆಟ್‌' ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿರುವ ಈ ನಟಿ, ನಾಯಕ ರವಿ ತೇಜಾ ಜೋಡಿಯಾಗಿ ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಸಲೀಸು ನಟನೆ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ಕೀರ್ತಿ ಈ ನಟಿಯದ್ದು.

‘ನೆಲ ಟಿಕೆಟ್‌’ ಸಿನಿಮಾ ನಿರ್ದೇಶಕ ಕಲ್ಯಾಣ್‌ ಕೃಷ್ಣ ಅವರು ತಮ್ಮ ಹೊಸ ಸಿನಿಮಾದ ನಾಯಕಿ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ಕಣ್ಣಾಯಿಸಿದಾಗ ಮುದ್ದು ಮುಖದ ಮಾಳವಿಕಾ ಶರ್ಮಾ ಫೋಟೊಗಳು ಅವರನ್ನು ಸೆಳೆದವು. ಹೀಗೆ ‘ನೆಲ ಟಿಕೆಟ್‌’ ಚಿತ್ರಕ್ಕೆ ಆಯ್ಕೆಯಾದವರು ಮಾಳವಿಕಾ.

ಈ ಸಿನಿಮಾದಲ್ಲಿ ಮಾಳವಿಕಾ ಟಾಮ್‌ಬಾಯ್‌ ಆಗಿ ನಟನೆ ಮಾಡಿದ್ದಾರೆ. ಸ್ಕ್ರೀನ್‌ನಲ್ಲಿ ಆದಷ್ಟು ಸಹಜವಾಗಿ ಕಾಣಿಸಲು ನಿರ್ದೇಶಕರು ಸೂಚಿಸಿದ್ದರಿಂದ ನಾನು ಈ ಸಿನಿಮಾದಲ್ಲಿ ಹೆಚ್ಚು ಮೇಕಪ್‌ನಲ್ಲಿ ಕಾಣಿಸಿಕೊಂಡಿಲ್ಲ ಎಂದು ಮಾಳವಿಕಾ ಹೇಳಿಕೊಂಡಿದ್ದರು. ಮುಂಬೈನಲ್ಲಿ ಹುಟ್ಟಿ ಬೆಳೆದ ಇವರು ತೆಲುಗು ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪರಿಚಯವಾಗಿದ್ದರಿಂದ ಸ್ವಲ್ಪ ಸ್ವಲ್ಪ ತೆಲುಗು ಕಲಿತಿದ್ದಾರೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸೋತರೂ, ಮುದ್ದು ಮೊಗದ ಮಾಳವಿಕಾಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದೇ ಸಾಕ್ಷಿ.

ಮಾಳವಿಕಾ ಸಿನಿಮಾಕ್ಕೆ ಬರುವ ಮೊದಲು ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. ಬ್ಲೂಯಿ, ಹಿಮಾಲಯ ಹಾಗೂ ಜಿಯೋನಿ ಮೊದಲಾದ ಜಾಹೀರಾತುಗಳಲ್ಲಿ ಕಂಡ ಪರಿಚಿತ ಮುಖವಿದು. ಮುಂಬೈನ ಅಂಧೇರಿಯಲ್ಲಿ ಹುಟ್ಟಿದ ಇವರಿಗೆ ಮಾಡೆಲಿಂಗ್‌ ಮತ್ತು ನೃತ್ಯ ಅಂದ್ರೆ ಪಂಚಪ್ರಾಣ. ಕಾನೂನು ಪದವಿಯಲ್ಲಿ ಡಿಗ್ರಿ ಪಡೆದಿದ್ದರೂ, ಆಸಕ್ತಿ ಇದ್ದಿದ್ದು ನಟನೆ ಮತ್ತು ಮಾಡೆಲಿಂಗ್‌ನಲ್ಲಿ. ಮಾಳವಿಕಾ ಶರ್ಮ ಅವರಿಗೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದು, ಆಗಾಗ ಈ ತಾಣಗಳಲ್ಲಿ ಬೋಲ್ಡ್‌ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.