ಮಳೆ: 14 ರೋಹಿಂಗ್ಯಾ ನಿರಾಶ್ರಿತರ ಸಾವು

7
ಬಾಂಗ್ಲಾದೇಶದ ಆಗ್ನೇಯ ಪ್ರದೇಶದಲ್ಲಿ ಭೂಕುಸಿತ

ಮಳೆ: 14 ರೋಹಿಂಗ್ಯಾ ನಿರಾಶ್ರಿತರ ಸಾವು

Published:
Updated:
ಮಳೆ: 14 ರೋಹಿಂಗ್ಯಾ ನಿರಾಶ್ರಿತರ ಸಾವು

ಢಾಕಾ: ಸುಮಾರು 10 ಲಕ್ಷ ರೋಹಿಂಗ್ಯಾ ಸಮುದಾಯದವರು ಆಶ್ರಯ ಪಡೆದಿರುವ ಬಾಂಗ್ಲಾದೇಶದ ಆಗ್ನೇಯ ಪ್ರದೇಶದಲ್ಲಿ ಸುರಿದ ಸತತ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಕನಿಷ್ಠ 14 ಮಂದಿ ಸಾವಿಗೀಡಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಮಳೆ ಮತ್ತು ಭೂಕುಸಿತಕ್ಕೆ ಮ್ಯಾನ್ಮಾರ್‌ ಗಡಿಯಲ್ಲಿರುವ ಕಾಕ್ಸ್‌ ಬಜಾರ್‌ ಮತ್ತು ರಂಗಮತಿ ಜಿಲ್ಲೆಗಳಲ್ಲಿ ಹಲವು ಮನೆಗಳು ಮತ್ತು ಟೆಂಟ್‌ಗಳು ಸಹ ಕೊಚ್ಚಿಹೋಗಿವೆ.

ಭೂಕುಸಿತದಿಂದ ರಸ್ತೆಯಲ್ಲಿ ಮಣ್ಣು ಮತ್ತು ಕಲ್ಲುಗಳು ಉರುಳಿಬಿದ್ದ ಪರಿಣಾಮ ರಂಗಮತಿ ಜಿಲ್ಲೆಗೆ ಸಂಪರ್ಕ ಸ್ಥಗಿತವಾಗಿದೆ. ಸುಮಾರು ಒಂಬತ್ತು ಸಾವಿರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry