ಅಗ್ನಿಶ್ರೀಧರ್, ಬಚ್ಚನ್ ವಿರುದ್ಧದ ಪ್ರಕರಣ ರದ್ದು

7

ಅಗ್ನಿಶ್ರೀಧರ್, ಬಚ್ಚನ್ ವಿರುದ್ಧದ ಪ್ರಕರಣ ರದ್ದು

Published:
Updated:

ಬೆಂಗಳೂರು: ’ರಾಜಕೀಯ ಪಕ್ಷಾಂತರ ನೆಪ ಮಾಡಿದ್ದನ್ನು ಆಕ್ಷೇಪಿಸಿ ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿ ಪತ್ರಕರ್ತ ಅಗ್ನಿಶ್ರೀಧರ್ ಮತ್ತು ಅವರ ಸಹಚರ ಬಚ್ಚನ್‌ ಸೇರಿದಂತೆ 9 ಜನರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಪ್ರಕರಣ ರದ್ದುಕೋರಿ ಆರೋಪಿಗಳಾದ ಕೆ.ಎಸ್.ರೋಹಿತ್ ಅಲಿಯಾಸ್‌ ಒಂಟೆ ಹಾಗೂ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್‌ ಸುನಿಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಫಿರ್ಯಾದುದಾರ ಟಾಟಾ ರಮೇಶ್‌, ‘ತಪ್ಪು ಗ್ರಹಿಕೆಯಿಂದ ದೂರು ನೀಡಿದ್ದೆ. ನನಗೂ ಆರೋಪಿಗಳಿಗೂ ಯಾವುದೇ ವೈಮನಸ್ಸು ಇಲ್ಲ. ಹಾಗಾಗಿ ದೂರು ಮುಂದುವರಿಸಲು ಇಚ್ಛಿಸುವುದಿಲ್ಲ’ ಎಂಬ ಹೇಳಿಕೆಯ ಮೇರೆಗೆ ನ್ಯಾಯಪೀಠ ಪ್ರಕರಣ ರದ್ದುಪಡಿಸಿತು.

ಪ್ರಕರಣದಲ್ಲಿ ಒಟ್ಟು 9 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಇವರಲ್ಲಿ ಅಗ್ನಿಶ್ರೀಧರ್ ಮತ್ತು ಬಚ್ಚನ್ ಪರ ಸಿ.ಎಚ್‌.ಹನುಮಂತರಾಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry