ಒಂದುಗೂಡುವುದು ಹೇಗೆ?

7

ಒಂದುಗೂಡುವುದು ಹೇಗೆ?

Published:
Updated:

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗದ ಹಿನ್ನೆಲೆಯಲ್ಲಿ ವೀರಶೈವ ಮತ್ತು ಲಿಂಗಾಯತ ಬಣಗಳ ಒಗ್ಗಟ್ಟಿಗೆ ವೇದಿಕೆ ಸಜ್ಜಾಗುತ್ತಿರುವುದಾಗಿ ವರದಿಯಾಗಿದೆ. ಪ್ರತ್ಯೇಕ ಧರ್ಮದ ವಿಚಾರವಾಗಿ ತೀವ್ರ ಭಿನ್ನಾಭಿಪ್ರಾಯ ಹೊಂದಿ ಇಬ್ಭಾಗವಾಗಿ ಹೋಗಿರುವ ಈ ಎರಡು ಗುಂಪುಗಳು ಹೇಗೆ ಒಂದುಗೂಡುತ್ತವೆ ಎಂಬುದು ಕುತೂಹಲಕಾರಿಯಾಗಿದೆ.

'ಧರ್ಮ ಸ್ಥಾಪಕ', 'ಧರ್ಮಗ್ರಂಥ','ವೀರಶೈವ' ಮತ್ತು 'ಲಿಂಗಾಯತ' ಪದಗಳ ವಿಷಯದಲ್ಲಿ ಯಾವ ನಿಲುವು ತಳೆಯಲಾಗುತ್ತದೆ? ಹಾಗೆಯೇ ಲಿಂಗಾಯತ 'ಹಿಂದೂ'ವೇ, 'ಅಹಿಂದೂ'ವೇ ಎಂಬ ಬಗ್ಗೆ ಯಾವ ನಿರ್ಣಯ ಕೈಗೊಳ್ಳಲಾಗುತ್ತದೆ? ಸಹಸ್ರಾರು ಜನರನ್ನು ಸೇರಿಸಿ ಹತ್ತಾರು ಸಮಾವೇಶಗಳನ್ನು ಮಾಡಿ ಜನರಿಗೆ ತಮ್ಮದೇ ಆದ ಸಂದೇಶಗಳನ್ನು ರವಾನಿಸಿದ್ದು ವ್ಯರ್ಥವೇ? ಇವರ ಮಾತನ್ನು ನಂಬಿದ ಜನರು ಮೋಸ ಹೋಗಬೇಕೆ? ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಸ್ಥಾಪನೆಯಾದ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ವ್ರೀಯ ಬಸವಸೇನೆಗಳ ಕಥೆ ಏನು?

–ಶಿವಕುಮಾರ ಬಂಡೋಳಿ, ಹುಣಸಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry