ಸೆನ್ನಾ ಮನಸ್ಸಿನಲ್ಲಿ ‘ಕಥೆಯೊಂದು ಶುರುವಾಗಿದೆ’

7

ಸೆನ್ನಾ ಮನಸ್ಸಿನಲ್ಲಿ ‘ಕಥೆಯೊಂದು ಶುರುವಾಗಿದೆ’

Published:
Updated:

ಕ್ಯೂಟ್‌ ನಟ ದಿಗಂತ್ ಅವರು ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ, ಕಥೆಯೊಂದನ್ನು ಹೇಳಲಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾ ಹೆಸರು ‘ಕಥೆಯೊಂದು ಶುರುವಾಗಿದೆ’. ಈ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ ಗುರುವಾರ ಬಿಡುಗಡೆ ಆಗಿವೆ ಎಂದು ಚಿತ್ರತಂಡ ತಿಳಿಸಿದೆ.

ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಮತ್ತು ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ಪುಷ್ಕರ್ ಫಿಲಂಸ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

‘ನಾಯಕ ದಿಗಂತ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ, ರೆಸಾರ್ಟ್‌ ಮಾಲೀಕನಾಗಿ ಈ ಚಿತ್ರದಲ್ಲಿ ನೋಡಬಹುದು. ಈತ ತನ್ನದೇ ಆದ ಕನಸುಗಳನ್ನು ಇಟ್ಟುಕೊಂಡು ಜೀವನದಲ್ಲಿ ಹೊಸ ಹಾದಿಯೊಂದನ್ನು ಕಂಡುಕೊಳ್ಳಲು ಯತ್ನಿಸುತ್ತ ಇರುತ್ತಾನೆ. ಏಕಾಂತ ಅರಸಿ ಬರುವ ನಾಯಕಿ, ನಾಯಕನ ಜೊತೆಯಾಗುತ್ತಾಳೆ’ ಎಂದು ಚಿತ್ರತಂಡ ‘ಕಥೆಯೊಂದು...’ ಬಗ್ಗೆ ಹೇಳಿಕೊಂಡಿದೆ.

ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಪ್ರಕಾಶ್ ತೂಮಿನಾಡ್, ಶ್ರೇಯಾ ಅಂಚನ್ ಈ ಚಿತ್ರದಲ್ಲಿ ಇದ್ದಾರೆ. ಉಡುಪಿ, ಮೈಸೂರು, ಬೆಂಗಳೂರು, ಪುದುಚೇರಿ, ಮುನ್ನಾರ್‌ನಲ್ಲಿ ಚಿತ್ರೀಕರಣ ನಡೆದಿದೆ. ‘ಈ ಚಿತ್ರವು ವೀಕ್ಷಕರಿಗೆ ಒಂದಿಷ್ಟು ಭಾವುಕ ಕ್ಷಣಗಳನ್ನು ಕಟ್ಟಿಕೊಡುತ್ತದೆ’ ಎನ್ನುವುದು ನಿರ್ದೇಶಕ ಸೆನ್ನಾ ಅವರ ಹೇಳಿಕೆ.

‘ಮೂವತ್ತರ ಹರೆಯದ ಯುವಕನ ಜೀವನದಲ್ಲಿನ ಏರಿಳಿತಗಳನ್ನು ಈ ಚಿತ್ರ ಹೇಳುತ್ತದೆ. ಚಿತ್ರವು ವೀಕ್ಷಕರ ಜೀವನದ ಸವಿನೆನಪುಗಳನ್ನು ಅವರ ಕಣ್ಮುಂದೆ ತರುತ್ತದೆ’ ಎಂದೂ ಸೆನ್ನಾ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry