ಷಿಕಾಗೊದಲ್ಲಿ ವೇಶ್ಯಾವಾಟಿಕೆ: ಆಂಧ್ರದ ದಂಪತಿಗೆ ಜೈಲು

7

ಷಿಕಾಗೊದಲ್ಲಿ ವೇಶ್ಯಾವಾಟಿಕೆ: ಆಂಧ್ರದ ದಂಪತಿಗೆ ಜೈಲು

Published:
Updated:

ಹೈದರಾಬಾದ್: ತೆಲುಗು ಚಿತ್ರರಂಗದ ನಟಿಯರನ್ನು ಬಳಸಿಕೊಂಡು ಅಮೆರಿಕದ ಷಿಕಾಗೊದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಆಂಧ್ರ ಪ್ರದೇಶದ ದಂಪತಿ ಈಗ ವರ್ಜೀನಿಯಾ ಜೈಲಿನಲ್ಲಿದ್ದಾರೆ.

ದಂಪತಿಯನ್ನು ಏಪ್ರಿಲ್‌ನಲ್ಲೇ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ‘ಷಿಕಾಗೊ ಟ್ರಿಬ್ಯೂನ್’ ಗುರುವಾರ (ಜೂನ್ 14) ವಿಸ್ತೃತ ವರದಿ ಪ್ರಕಟಿಸಿದ ನಂತರ ಈ ಬಗ್ಗೆ ಮಾಹಿತಿ ದೊರೆತಿದೆ.

ಕಿಶನ್ ಮೊಡುಗುಮುಡಿ (34) ಮತ್ತು ಆತನ ಪತ್ನಿ ಚಂದ್ರಾ (31) ಷಿಕಾಗೊದಲ್ಲಿ ನೆಲೆಸಿದ್ದರು. ಅಲ್ಲಿನ ತೆಲುಗು ಸಂಘ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸುಳ್ಳು ದಾಖಲೆ ಸಲ್ಲಿಸಿ, ತಾತ್ಕಾಲಿಕ ವೀಸಾಗಳಲ್ಲಿ ನಟಿಯರನ್ನು ಕರೆಸಿಕೊಳ್ಳುತ್ತಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

ವಾಷಿಂಗ್ಟನ್, ನ್ಯೂಜೆರ್ಸಿ ಮತ್ತು ಡಲ್ಲಾಸ್‌ನಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಸಮ್ಮೇಳನಗಳಿಗೆ ಹೋಗಿ, ಅಲ್ಲಿ ಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದರು. ಅವರಿಗೆ ‘ಹುಡುಗಿಯರನ್ನು ಒದಗಿಸುವ’ ಆಮಿಷ ಒಡ್ಡುತ್ತಿದ್ದರು. ವ್ಯವಹಾರ ಕುದುರಿದ ನಂತರ ನಟಿಯರನ್ನು ಪ್ರತಿನಿಧಿಗಳ ಬಳಿಗೆ ಕಳುಹಿಸುತ್ತಿದ್ದರು. ಇದಕ್ಕಾಗಿ ಅವರು 3 ಸಾವಿರ ಡಾಲರ್ ಪಡೆದುಕೊಳ್ಳುತ್ತಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧರಿಸಿ, ವಿಚಾರಣೆ ನಡೆಸಿದಾಗ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ. ನಂತರ ಅವರನ್ನು ಬಂಧಿಸಲಾಗಿದೆ. ಭಾರತದಲ್ಲಿ ಈ ದಂಪತಿ ಹಲವು ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry