ಬೆಳ್ಮಣ್‌: ಕನ್ನಡ ಮಾಧ್ಯಮ ಶಾಲೆಗೆ ಬೀಗ

7

ಬೆಳ್ಮಣ್‌: ಕನ್ನಡ ಮಾಧ್ಯಮ ಶಾಲೆಗೆ ಬೀಗ

Published:
Updated:
ಬೆಳ್ಮಣ್‌: ಕನ್ನಡ ಮಾಧ್ಯಮ ಶಾಲೆಗೆ ಬೀಗ

ಕಾರ್ಕಳ: ತಾಲ್ಲೂಕಿನ 90 ವರ್ಷಗಳ ಇತಿಹಾಸ ಇರುವ ಬೆಳ್ಮಣ್ ಇಟ್ಟಮೇರಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕೊರತೆ ಕಾರಣದಿಂದ ಬಾಗಿಲಿಗೆ ಬೀಗ ಹಾಕಿದ್ದಾರೆ.

ಶಾಲೆಯಲ್ಲಿ ಈ ಸಾಲಿನಲ್ಲಿ 22 ವಿದ್ಯಾರ್ಥಿಗಳಿದ್ದು ಶಾಲೆ ಮುಂದು ವರಿಸುವುದು ಕಷ್ಟವಿರಲಿಲ್ಲ. ಆದರೆ, ಶಿಕ್ಷಕರೇ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ವಿಲೀನಗೊಳಿಸಲಾಗುತ್ತಿದೆ. 2012 ರಿಂದ ಶಾಲೆಯಲ್ಲಿ ಮೆಟಿಲ್ಡಾ ಮಿನೇಜಸ್ ಮಾತ್ರವಿದ್ದು, ಏಕೋಪಾಧ್ಯಾಯ ಶಾಲೆ ಆಗಿತ್ತು. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನಿವೃತ್ತಿ ಬಳಿಕ ಸರ್ಕಾರ ಶಿಕ್ಷಕ ರನ್ನು ನೀಡದಿರುವ ಕಾರಣ ಈ ಶಾಲೆ ಮುಚ್ಚಬೇಕಾಗಿ ಬಂದಿದೆ.

2007ರಲ್ಲಿ ಅಮೃತ ಮಹೋತ್ಸ ವದ ಸಂಭ್ರಮ ಕಂಡಿದ್ದು, 10 ವರ್ಷಗಳಲ್ಲಿ ಶತಮಾ ನೋತ್ಸವ ಆಚರಿಸಬೇಕಿತ್ತು. ಈಗ ಮುಚ್ಚಿರುವುದು ಶಿಕ್ಷಣ ಪ್ರೇಮಿ ಗಳಲ್ಲಿ ಬೇಸರ ತಂದಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರ ಮೂಲ ಸೌಕರ್ಯ ನೀಡದಿರುವುದು ಪ್ರಮುಖ ಕಾರಣ. ಮುಖ್ಯವಾಗಿ ನಿವೃತ್ತರಾದ ಶಿಕ್ಷಕರ ಜಾಗಕ್ಕೆ ಸೂಕ್ತ ಶಿಕ್ಷಕರ ನೇಮಕಾತಿ ಮಾಡದೇ ಇರುವುದು ಒಂದು. ಪೋಷಕರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ವೈಭವೀಕರಣಕ್ಕೆ ಮಾರು ಹೋಗಿ, ಮಕ್ಕಳನ್ನು ಅಂತಹ ಶಾಲೆಗೆ ಸೇರಿಸುವುದು ಕನ್ನಡ ಮಾಧ್ಯಮ ಶಾಲೆಗಳಿಗೆ ಹೊಡೆತ ಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry