ಮಹಾರಾಷ್ಟ್ರ, ಮಧ್ಯಪ್ರದೇಶಕ್ಕೆ ಎಸ್‌ಐಟಿ

7

ಮಹಾರಾಷ್ಟ್ರ, ಮಧ್ಯಪ್ರದೇಶಕ್ಕೆ ಎಸ್‌ಐಟಿ

Published:
Updated:
ಮಹಾರಾಷ್ಟ್ರ, ಮಧ್ಯಪ್ರದೇಶಕ್ಕೆ ಎಸ್‌ಐಟಿ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಡಿ ಬಂಧಿತರಾದ ಆರೋಪಿಗಳು ನೀಡಿರುವ ಮಾಹಿತಿ ಆಧರಿಸಿ ಎಸ್‌ಐಟಿಯ ವಿಶೇಷ ತಂಡಗಳು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಕ್ಕೆ ತೆರಳಿವೆ.

‘ಗುಂಡು ಹಾರಿಸಿದ್ದು ನಾನೇ’ ಎಂದು ತಪ್ಪೊಪ್ಪಿಕೊಂಡಿರುವ ಆರೋಪಿ ಪರಶುರಾಮ್‌ ವಾಘ್ಮೋರೆ, ಬೈಕ್‌ನಲ್ಲಿ ತನ್ನನ್ನು ಗೌರಿ ಮನೆ ಹತ್ತಿರ ಕರೆದುಕೊಂಡು ಹೋಗಿದ್ದ ವ್ಯಕ್ತಿಯೇ ಪಿಸ್ತೂಲ್ ತೆಗೆದುಕೊಂಡು ಹೋಗಿದ್ದಾಗಿ ಹೇಳಿದ್ದಾನೆ. ಪಿಸ್ತೂಲ್ ಸಿಗದಿದ್ದರೆ ಆರೋಪ ಸಾಬೀತಪಡಿಸಲು ಕಷ್ಟವಾಗುತ್ತದೆ. ಹೀಗಾಗಿ, ಅದರ ಪತ್ತೆಗಾಗಿಯೇ ಅಧಿಕಾರಿಗಳು ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ.

‘ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಕೆಲ ಯುವಕರು, ಆರೋಪಿಗಳ ಜತೆ ಮಾತನಾಡಿರುವುದು ಮೊಬೈಕ್ ಕರೆ ವಿವರದಿಂದ (ಸಿಡಿಆರ್) ಗೊತ್ತಾಗಿದೆ. ಅವರನ್ನು ಹುಡುಕಿಕೊಂಡು ತಂಡಗಳು ಆ ರಾಜ್ಯಕ್ಕೆ ಹೋಗಿವೆ. ಪಿಸ್ತೂಲಿನ ಬಗ್ಗೆ ಯಾರೂ ಬಾಯ್ಬಿಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಂದುವರಿದ ಮಹಜರು: ಪರಶುರಾಮ ಓಡಾಡಿದ್ದ ಎನ್ನಲಾದ ನಗರದ ಕೆಲ ಸ್ಥಳಗಳಲ್ಲಿ ಭಾನುವಾರವೂ ಮಹಜರು ಕಾರ್ಯ ನಡೆಸಲಾಯಿತು.

‘ಆರೋಪಿಯು ಸ್ಥಳ ಹಾಗೂ ರಸ್ತೆಗಳನ್ನು ಗುರುತು ಹಿಡಿದಿದ್ದರೆ ಒಂದೇ ದಿನದಲ್ಲೇ ಮಹಜರು ಮುಗಿಯುತ್ತಿತ್ತು. ಆದರೆ, ಆತನಿಗೆ ಹಲವು ಸ್ಥಳಗಳು ಗೊತ್ತಿಲ್ಲ. ತಾನು ವಾಸವಿದ್ದ ಕೊಠಡಿ, ಗೌರಿಯವರ ಮನೆ ಹಾಗೂ ಅದರ ಎದುರಿನ ಉದ್ಯಾನವನ್ನಷ್ಟೇ ಗುರುತಿಸಿದ್ದಾನೆ. ಇನ್ನು ಹಲವು ಸ್ಥಳಗಳಿಗೆ ಆತನನ್ನು ಕರೆದುಕೊಂಡು ಹೋಗಬೇಕಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry