ಲಾರಿ ಮುಷ್ಕರ ಇಂದಿನಿಂದ

7

ಲಾರಿ ಮುಷ್ಕರ ಇಂದಿನಿಂದ

Published:
Updated:
ಲಾರಿ ಮುಷ್ಕರ ಇಂದಿನಿಂದ

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹಾಗೂ ವಾಹನಗಳ ‘ಥರ್ಡ್‌ ಪಾರ್ಟಿ’ ವಿಮೆ ಕಂತಿನ ದರ ಹೆಚ್ಚಳ ವಿರೋಧಿಸಿ ಸರಕು ಸಾಗಣೆ ವಾಹನಗಳ ಮಾಲೀಕರ ಸಂಘ ಸೋಮವಾರದಿಂದ ದೇಶದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಮುಷ್ಕರದಿಂದಾಗಿ ಲಕ್ಷಾಂತರ ಲಾರಿಗಳ ಓಡಾಟ ಸ್ಥಗಿತವಾಗಲಿದೆ. ಇದರಿಂದಾಗಿ ಡೀಸೆಲ್‌, ಪೆಟ್ರೋಲ್‌ ಸರಬರಾಜು ಸೇರಿ ವಿವಿಧ ರೀತಿಯ ಸರಕುಗಳ ಸಾಗಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.

‘ಔಷಧಿ, ಹಾಲು, ತರಕಾರಿ ಸೇರಿ ದಿನಬಳಕೆ ವಸ್ತುಗಳ ಪೂರೈಕೆ ಲಾರಿಗಳನ್ನು ಹೊರತುಪಡಿಸಿ ಉಳಿದ ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯುವುದಿಲ್ಲ’ ಎಂದು ಸಂಘದ ಅಧ್ಯಕ್ಷ ಬಿ. ಚನ್ನಾರೆಡ್ಡಿ ತಿಳಿಸಿದರು.

‘ಬೇಡಿಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಈಡೇರಿಸುವ ಭರವಸೆ ನೀಡಿಲ್ಲ’ ಎಂದರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry