ಎಲ್‌ಜಿ ಕಚೇರಿಯಲ್ಲಿ ಧರಣಿ; ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್ ತರಾಟೆ

7

ಎಲ್‌ಜಿ ಕಚೇರಿಯಲ್ಲಿ ಧರಣಿ; ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್ ತರಾಟೆ

Published:
Updated:
ಎಲ್‌ಜಿ ಕಚೇರಿಯಲ್ಲಿ ಧರಣಿ; ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್ ತರಾಟೆ

ನವದೆಹಲಿ: ಲೆಫ್ಟಿನೆಂಟ್‌ ಗವರ್ನರ್‌  ಅನಿಲ್‌ ಬೈಜಾಲ್‌  (ಎಲ್‌ಜಿ) ಕಚೇರಿಯಲ್ಲಿ ಧರಣಿ ಆರಂಭಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನೀವು ಕಳೆದ 8 ದಿನಗಳಿಂದ ಪ್ರತಿಭಟನಾನಿರತ ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧರಣಿ ಕೈಗೊಂಡಿದ್ದೀರಿ.ಈ ಧರಣಿಯನ್ನು ಕೈಗೊಳ್ಳಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.

ಧರಣಿಯ ಮೌಲ್ಯತೆಯನ್ನು ಪ್ರಶ್ನಿಸಿರುವ ಹೈಕೋರ್ಟ್, ನಿಮ್ಮ ಈ ನಡೆಯನ್ನು ಪ್ರತಿಭಟನೆ ಎಂದು ಪರಿಗಣಿಸಲಾಗುವುದಿಲ್ಲ. ಇನ್ನು ಮುಂದೆ ಯಾರ ಮನೆ ಹಾಗೂ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳುವಂತಿಲ್ಲ ಎಂದು ತಾಕೀತು ಮಾಡಿದೆ.

ಧರಣಿಯನ್ನು ನಿಲ್ಲಿಸುವಂತೆ ಕೇಜ್ರಿವಾಲ್‌ಗೆ ಸೂಚಿಸಬೇಕೆಂದು ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಅವರು ನ್ಯಾಯಾಲಯದ ಬಳಿ ಮನವಿ ಮಾಡಿದ್ದರು.

ಕಳೆದ ಒಂದು ವಾರದಿಂದ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಸಚಿವರಾದ ಸತ್ಯೇಂದ್ರ ಜೈನ್, ಗೋಪಾಲ್ ರೈ ಧರಣಿ ಕೈಗೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !