ಸಂಸ್ಕೃತಿ ಅಧ್ಯಯನ; ಕ್ಯಾಲಿಫೋರ್ನಿಯ ಯಾಲೆ ವಿ.ವಿ ತಂಡ ಭೇಟಿ

7

ಸಂಸ್ಕೃತಿ ಅಧ್ಯಯನ; ಕ್ಯಾಲಿಫೋರ್ನಿಯ ಯಾಲೆ ವಿ.ವಿ ತಂಡ ಭೇಟಿ

Published:
Updated:

ಕಂಪ್ಲಿ: ಇಲ್ಲಿಯ ಜನಪದ ಹಿರಿಯ ಕಲಾವಿದ ಪರಶುರಾಮಪ್ಪ ಚಿತ್ರಗಾರ ಮನೆಗೆ ಕ್ಯಾಲಿಫೋರ್ನಿಯದ ಯಾಲೆ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯ ನಿಮಿತ್ತ ಭಾನುವಾರ ಭೇಟಿ ನೀಡಿ ವಿಜಯನಗರ ಪರಂಪರೆಯ ಕಿನ್ನಾಳ್‌ ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.

ಹಿರಿಯ ಕಲಾವಿದ ಪರಶುರಾಮಪ್ಪ ಚಿತ್ರಗಾರ ಅವರು ಕಟ್ಟಿಗೆ, ಮಣ್ಣಿನಿಂದ ಸಿದ್ಧಪಡಿಸಿದ ಬೀರಪ್ಪ ದೇವರು, ಗ್ರಾಮದೇವತೆ, ಗರಡಿ ಕೃಷ್ಣಮೂರ್ತಿ, ಕೃಷ್ಣ, ಗಜಗೌರಿ, ಋಷಿಮುನಿ, ತೇರು ಅಲಂಕಾರ ಗೊಂಬೆ, ಕಾಮಧೇನು, ದ್ವಾರಪಾಲಕ, ಪ್ರಾಣಿ ಮುಖವಾಡ, ಹಸು, ಕುದುರೆ, ದೇವರ ಛತ್ರಿ, ಚಾಮರ, ಕುಂಚದಿಂದ ಬಿಡಿಸಿದ ಚಿತ್ರ ಸೇರಿದಂತೆ ಪಾರಂಪರಿಕ ಕಲಾತ್ಮಕ ವಸ್ತುಗಳನ್ನು ವೀಕ್ಷಿಸಿದರು.

ನಂತರ ಯಾಲೆ ವಿಶ್ವವಿದ್ಯಾಲಯದ ಡಾ.ಕರೆನ್‌ಫೆಸ್‌ ಮಾತನಾಡಿ, ‘ಭಾರತದ ಗ್ರಾಮೀಣ ಭಾಗದಲ್ಲಿರುವ ಸಂಪ್ರದಾಯಿಕ ಚಿತ್ರಕಲೆ, ಸಂಸ್ಕೃತಿ, ಪರಂಪರೆ ಆಳ ಅಧ್ಯಯನ ನಿಮಿತ್ತ ಹಿರಿಯ ಕಲಾವಿದ ಪರಶುರಾಮಪ್ಪ ಚಿತ್ರಗಾರ ಮನೆಗೆ ಭೇಟಿ ನೀಡಿದ್ದೇವೆ. ಅವರು ಸಿದ್ಧಪಡಿಸಿದ ಜನಪದ ಶೈಲಿಯ ಮೂರ್ತಿ ಶಿಲ್ಪಗಳನ್ನು ನೋಡಿದಾಗ ಭಾರತದಲ್ಲಿ ಬಹುಮುಖಿ ಸಂಸ್ಕೃತಿ ಇನ್ನು ಜೀವಂತವಾಗಿದೆ’ ಎಂದರು.

‘ಭಾರತದಲ್ಲಿ ಅವಿಭಕ್ತ ಕುಟುಂಬ ಏಕತೆ, ಸಮಗ್ರತೆ, ಅರ್ಥೈಸಿಕೊಳ್ಳುವಿಕೆ ಗುಣಗಳ ಜೊತೆಗೆ ಸಾಂಪ್ರದಾಯಿಕ ಆಚರಣೆಗಳು ಇಂದಿಗೂ ಜೀವಂತ ಆಗಿವೆ. ಈ ಕುರಿತು ಅಧ್ಯಯನ ನಡೆಸಿ ಸಂಪದ್ಭರಿತವಾದ ನಮ್ಮ ಕ್ಯಾಲಿಫೋರ್ನಿಯದಲ್ಲಿ ಭಾರತದ ಸಾಂಪ್ರದಾಯಿಕ ಪರಿಕಲ್ಪನೆ, ಸಂಸ್ಕೃತಿಯನ್ನು ಪುನರ್‌ ನಿರ್ಮಿಸಲು ಪ್ರಸ್ತುತ ಕ್ಷೇತ್ರ ಕಾರ್ಯ ಸಹಕಾರಿ’ ಎಂದು ವಿವರಿಸಿದರು.

‘ನಮ್ಮ ದೇಶ ಆರ್ಥಿಕವಾಗಿ ಸಬಲವಾಗಿದೆ. ಆದರೆ, ಬದಕಲು ಬೇಕಾದ ಸಂಸ್ಕೃತಿ–ಸಂಪ್ರದಾಯದ ಕೊರತೆ ಇದೆ.ಈ ನಿಟ್ಟಿನಲ್ಲಿ ಭಾರತದ ಗ್ರಾಮೀಣ ಚಿತ್ರಕಲೆ, ಚಿತ್ರಕಲಾವಿದರನ್ನು ಮತ್ತು ಅವರ ಕುಟುಂಬ ಕಂಡು ಸಂತೋಷವಾಗಿದೆ. ಇಂಥ ಸಂಪ್ರದಾಯ ನಮ್ಮಲ್ಲಿ

ಆರಂಭವಾಗಬೇಕು ಎನ್ನುವ ಉದ್ದೇಶ ನಮ್ಮದು’ ಎಂದು ವಿಶ್ವವಿದ್ಯಾಯಲದ ಬಿ.ಎ ವಿದ್ಯಾರ್ಥಿಗಳಾದ ಬ್ರೆಡನ್‌ ಕೌನ್‌, ಡೆನಿಚೋ, ಲೂರೆಲ್‌ ಆ್ಯಡಮ್ಸ್‌, ಮಿಚಿಲೆ ಬೊನಿಲಾ ತಿಳಿಸಿದರು.

ಯಾಲೆ ವಿಶ್ವವಿದ್ಯಾಲಯ ಕಲಾ ವಿಭಾಗದ ಉಪನ್ಯಾಸಕಿ ಮೇಘನಾ ಬಿಸಿನೀರು, ಬೆಂಗಳೂರು ಜನಸ್ತೋಮ ಸಂಘಟನೆಯ ಟಿ.ಬಿ. ದಿನೇಶ್‌, ಹಂಪಿ ಕನ್ನಡ ವಿಶ್ವವಿದ್ಯಾಲಯದ ಚೆಲುವರಾಜು, ಉಪನ್ಯಾಸಕಿ ಕೆ. ನಾಗಪುಷ್ಪಲತಾ, ಗೋಪಿಕೃಷ್ಣ, ಚಿತ್ರಕಲಾವಿದೆ ಸುಮಿತ್ರಮ್ಮ, ಚಿತ್ರಕಲಾ ಶಿಕ್ಷಕ ರಾಮಚಂದ್ರ ಚಿತ್ರಗಾರ, ರವಿ ಚಿತ್ರಗಾರ, ಎಸ್‌.ಡಿ. ಬಸವರಾಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry