7
ನಡೆಯದ ನೇಮರ್ ಮೋಡಿ: ಸ್ವಿಟ್ಜರ್‌ಲೆಂಡ್–ಬ್ರೆಜಿಲ್ ಪಂದ್ಯ ಡ್ರಾ

ಬ್ರೆಜಿಲ್ ಆಸೆಗೆ ತಣ್ಣೀರೆರಚಿದ ಜುಬೇರ್

Published:
Updated:
ಬ್ರೆಜಿಲ್ ಆಸೆಗೆ ತಣ್ಣೀರೆರಚಿದ ಜುಬೇರ್

ಮಾಸ್ಕೋ: ಈ ಬಾರಿಯ ವಿಶ್ವಕಪ್ ಜಯಿಸುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಬ್ರೆಜಿಲ್ ಗೆಲುವಿನ ಆಸೆಗೆ ಸ್ವಿಟ್ಜರ್‌ಲೆಂಡ್‌ನ ಸ್ಟೀವನ್ ಜುಬೇರ್ ತಣ್ಣೀರೆರಚಿದರು.

ರೋಸ್ತೋ ಅರೆನಾದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ’ಇ’ ಗುಂಪಿನಲ್ಲಿ ಬ್ರೆಜಿಲ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್ 1–1ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ನೇಮರ್ ಅವರಂತಹ ದಿಗ್ಗಜ ಆಟಗಾರ ಇರುವ ಬ್ರೆಜಿಲ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವಿನ ಅವಕಾಶ ಇತ್ತು. ಆದರೆ  ಕೊನೆಯ ಹಂತದಲ್ಲಿ ಅದು ಕೈತಪ್ಪಿತು.

ಪಂದ್ಯದ 20ನೇ ನಿಮಿಷದಲ್ಲಿ ಬ್ರೆಜಿಲ್‌ನ ಮಿಢ್‌ಫೀಲ್ಡರ್ ಫಿಲಿಪ್ ಕುಟ್ಹಿನೊ ನಾಲ್ವರು ರಕ್ಷಣಾ ಆಟಗಾರರನ್ನು ವಂಚಿಸ ಒದ್ದ ಚೆಂಡು ಗಾಳಿಯಲ್ಲಿ ತೇಲುತ್ತ ಗೋಲು ಪೆಟ್ಟಿಗೆಯ ಎಡಬದಿಯ ಕಂಬಕ್ಕೆ ಬಡಿಯಿತು. ಚೆಂಡು ಹಿಡಿಯಲು ಹಾರಿದ ಸ್ವಿಸ್ ಗೋಲ್‌ಕೀಪರ್ ತಲೆ ಮೇಲಿಂದ ಸಾಗಿ ಪೆಟ್ಟಿಗೆಯೊಳಗೆ ಸೇರಿತು. ಬ್ರೆಜಿಲ್ ತಂಡದ ಅಭಿಮಾನಿಗಳ ಗ್ಯಾಲರಿಯಲ್ಲಿ ಸಂಭ್ರಮದ ಅಲೆ ಎದ್ದಿತು.  ಮುಂದಿನ ಮೂವತ್ತು ನಿಮಿಷಗಳಲ್ಲಿ ಸ್ವಿಸ್ ತಂಡವು ಗೋಲು ಹೊಡೆಯಲು ಮಾಡಿದ ಸಾಹಸಗಳು ವ್ಯರ್ಥವಾದವು. ಆದರೆ ಬ್ರೆಜಿಲ್ ತಂಡವು ಕೂಡ ಮತ್ತೊಂದು ಗೋಲು ಗಳಿಸದಂತೆ ಸ್ವಿಸ್ ಆಟಗಾರರು ನೋಡಿಕೊಂಡರು.

50ನೇ ನಿಮಿಷದಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟೀವನ್ ಜುಬೇರ್ ಕಾಲ್ಚಳಕ ಮೆರೆದರು. ಗೋಲುಪೆಟ್ಟಿಯಿಂದ ಆರು ಯಾರ್ಡ್‌ ದೂರದಿಂದ ಜುಬೇರ್ ಮಾಡಿದ ಕಿಕ್‌ ಫಲ ನೀಡಿತ್ತು. ಸ್ಕೋರ್‌ ಬೋರ್ಡ್‌ನಲ್ಲಿ ಸಮಬಲ ಮಿಂಚಿತು. ನಂತರದ ಅವಧಿಯಲ್ಲಿ ಬ್ರೆಜಿಲ್ ಗೋಲು ಗಳಿಸುವ ಪ್ರಯತ್ನಗಳು ಫಲಿಸಲಿಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿ ‘ಸಾಂಬಾ ನೃತ್ಯ’ ಕಾಣಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry