ಮಹಾರಾಷ್ಟ್ರ: ವಿಷಾಹಾರ ಸೇವನೆ –3 ಮಕ್ಕಳ ಸಾವು, 200 ಮಂದಿ ಅಸ್ವಸ್ಥ

7

ಮಹಾರಾಷ್ಟ್ರ: ವಿಷಾಹಾರ ಸೇವನೆ –3 ಮಕ್ಕಳ ಸಾವು, 200 ಮಂದಿ ಅಸ್ವಸ್ಥ

Published:
Updated:
ಮಹಾರಾಷ್ಟ್ರ: ವಿಷಾಹಾರ ಸೇವನೆ – 4 ಸಾವು, 70 ಮಂದಿ ಅಸ್ವಸ್ಥ

ರಾಯಗಡ/ಮಹಾರಾಷ್ಟ್ರ: ಗೃಹ ಪ್ರವೇಶ ಸಮಾರಂಭಲ್ಲಿ ವಿಷಾಹಾರ ಸೇವನೆಯಿಂದ 3 ಮಕ್ಕಳು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮುಂಬೈನ ಖಾಲಾಪುರ್ ಬಳಿಯ ಮಹಾದ್ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಖಾಲಾಪುರ್ ಮುಂಬೈನಿಂದ 170ಕಿ.ಮೀ ದೂರದಲ್ಲಿದೆ.

ಮೃತರನ್ನು  ಪ್ರಗತಿ ಶಿಂಧೆ(12), ರಿಷಿಕೇಶ್ ಶಿಂಧೆ (12), ಕಲ್ಯಾಣಿ ಶಿಂಘೋಟೆ (7) ಎಂದು ಗುರುತಿಸಲಾಗಿದೆ. ಕೆಲವರ ಪರಿಸ್ಥಿತಿ ಗಂಭೀರವಾಗಿದೆ. 

ಆಹಾರದಲ್ಲಿ ರಾಸಾಯನಿಕ ಕೀಟನಾಶಕ ಸೇರಿರುವುದೇ ಜನರು ಅಸ್ವಸ್ಥಗೊಳ್ಳಲು ಕಾರಣ ಎಂದು ವೈದ್ಯರು, ಪೊಲೀಸರು ತಿಳಿಸಿದ್ದಾರೆ. 

ನಡೆದದ್ದೇನು?

ಸುಭಾಷ್ ಮಾನೆ ಎಂಬುವರು ಮಹಾದ್ ಗ್ರಾಮದಲ್ಲಿ  ಗೃಹ ಪ್ರವೇಶ ಸಮಾರಂಭ ಏರ್ಪಡಿಸಿದ್ದರು. ಜೊತೆಗೆ ವಾಸ್ತು ಶಾಂತಿ ಪೂಜೆಯೂ ಇತ್ತು. 

ಗೃಹ ಪ್ರವೇಶದಲ್ಲಿ ಒಟ್ಟು 500 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರ ಮಕ್ಕಳು ಹೊಟ್ಟೆ ನೋವು ಎಂದು ನರಳಾಡಿದರು. ಬಳಿಕ ದೊಡ್ಡವರಿಗೂ ಹೊಟ್ಟೆನೋವು, ವಾಂತಿ ಆರಂಭವಾಯಿತು. ಅಸ್ವಸ್ಥಗೊಂಡ 200 ಮಂದಿಯನ್ನು ಕೊಪೋಲಿಯಲ್ಲಿರುವ ಪಾರ್ವತಿ ಆಸ್ಪತ್ರೆಗೆ ದಾಖಲಿಸಲಾಯಿತು ರೋಗಿಯ ಸಂಬಂಧಿಕರೊಬ್ಬರು ತಿಳಿಸಿದರು.

ಈ ಬಗ್ಗೆ ರಾಯಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ರಾಯಗಡ ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry