ದೇಶದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಏರಿಕೆಯಾಗುತ್ತಿವೆ. ರೋಗಿಗಳು ಆಮ್ಲಜನಕ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದಿಂದ ಆಮ್ಲಜನಕ ರಫ್ತು ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಜನವರಿಯಲ್ಲಿ ಶೇ 700ರಷ್ಟು ಏರಿಕೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಆಮ್ಲಜನಕ ಭಾರಿ ಪ್ರಮಾಣದಲ್ಲಿ ರಫ್ತಾಗುತ್ತಿದೆ ಎಂಬ ಸುದ್ದಿಯನ್ನು ಪಿಐಬಿ ಫ್ಯಾಕ್ಟ್‌ಚೆಕ್ ಘಟಕ ಪರಿಶೀಲಿಸಿದೆ. ಸುದ್ದಿಯಲ್ಲಿರುವ ಪ್ರಕಾರ, ಆಮ್ಲಜನಕದ ರಫ್ತು ಶೇ 700ರಷ್ಟು ಹೆಚ್ಚಿರುವುದು ನಿಜ. ಆದರೆ ಅದು ಕೈಗಾರಿಕೆಗಳಿಗೆ ಬಳಸುವ ಆಮ್ಲಜನಕ ಎಂದು ಸ್ಪಷ್ಟನೆ ನೀಡಿದೆ. ವೈದ್ಯಕೀಯ ಉದ್ದೇಶಕ್ಕೆ ಬಳಸುವ ಆಮ್ಲಜನಕದ ರಫ್ತು ಕುರಿತ ದತ್ತಾಂಶ ಇದಲ್ಲ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.