ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೇಟಿಂಗ್‌ ಮಾಹಿತಿಯು ಸಿಬಿಎಸ್‌ಇ ಪಠ್ಯದಲ್ಲಿ ಇದೆ ಎನ್ನುವುದು ಸುಳ್ಳು ಸುದ್ದಿ

Published 12 ಫೆಬ್ರುವರಿ 2024, 0:22 IST
Last Updated 12 ಫೆಬ್ರುವರಿ 2024, 0:22 IST
ಅಕ್ಷರ ಗಾತ್ರ

‘ಡೇಟಿಂಗ್‌ ಆ್ಯಂಡ್‌ ರಿಲೇಷನ್‌ಶಿಪ್ಸ್‌: ಅಂಡರ್‌ಸ್ಟ್ಯಾಂಡಿಂಗ್‌ ಯುವರ್‌ಸೆಲ್ಫ್‌ ಆ್ಯಂಡ್‌ ದಿ ಅದರ್‌ ಪರ್ಸನ್ಸ್‌’ ಎಂಬ ತಲೆಬರಹ ಇರುವ ಪುಟವೊಂದರ ಚಿತ್ರ. ಡೇಟಿಂಗ್‌ ಆ್ಯಪ್‌ ಕುರಿತ ಮಾಹಿತಿ ಇರುವ, ವೈಯಕ್ತಿಕ ಸಂಬಂಧವನ್ನು ಕೊನೆಗಾಣಿಸುವ ಕುರಿತೆಲ್ಲಾ ಮಾಹಿತಿಗಳಿರುವ ಪುಟವೊಂದರ ಚಿತ್ರ. ಜೊತೆಯಲ್ಲಿ, ವಿಜ್ಞಾನದ ವಿಷಯ ಕುರಿತ ಕೈಬರಹ ಇರುವ ಪುಟ– ಹೀಗೆ ಎರಡು ಚಿತ್ರಗಳಿರುವ ಫೋಟೊ ಕೊಲಾಜ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸಿಬಿಎಸ್‌ಇ ಪಠ್ಯಕ್ರಮದ 9ನೇ ತರಗತಿಯ ಪಠ್ಯಪುಸ್ತಕ ಎಂದೂ ಹೇಳಲಾಗುತ್ತಿದೆ. ‘9ನೇ ತರಗತಿಗೆ ಡೇಟಿಂಗ್‌ ಕುರಿತು ಪಾಠ ಮಾಡುವಲ್ಲಿಗೆ ಬಂದವಾ ಎನ್‌ಸಿಆರ್‌ಟಿ ಪುಸ್ತಕಗಳು. ಮಕ್ಕಳು ಯಾಕಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೊರಳುತ್ತಿರೆ ಎಂದು ನಾವು ಯೋಚಿಸುತ್ತಿದ್ದರೆ, ಉತ್ತರ ಇಲ್ಲಿದೆ. ಏನಿದು?’ ಎಂಬಂತೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕೆಲವು ಮಾಧ್ಯಮಗಳು ಕೂಡ ವರದಿ ಮಾಡಿವೆ. ಆದರೆ, ಇದು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿರುವ ಸುದ್ದಿ.

ಈ ಕುರಿತು ಸಿಬಿಎಸ್‌ಇ ತನ್ನ ‘ಎಕ್ಸ್‌’ ಖಾತೆ ಮೂಲಕ ಸ್ಪಷ್ಟೀಕರಣ ನೀಡಿದೆ. ‘ಇದು ಸಿಬಿಎಸ್‌ಇಯ ಪಠ್ಯವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊವು  ಗಗನ್‌ ದೀಪ್‌ ಕೌರ್‌ ಎಂಬವರು ಬರೆದ, ಜಿ.ರಾಮ್‌ ಬುಕ್ಸ್‌ ಪ್ರೈ ಲಿ. ಪ್ರಕಟಿಸಿರುವ, ‘ಎ ಗೈಡ್‌ ಟು ಸೆಲ್ಫ್‌ ಅವೇರ್‌ನೆಸ್‌ ಆ್ಯಂಡ್‌ ಎಂಪವರ್‌ಮೆಂಟ್‌’ ಪುಸ್ತಕದ ಪುಟಗಳ ಚಿತ್ರಗಳು. ಅವುಗಳನ್ನೇ ಸಿಬಿಎಸ್‌ಇ ಪಠ್ಯ ಎಂದು ಹೇಳಲಾಗುತ್ತಿದೆ’ ಎಂದು ಸಿಬಿಎಸ್‌ಇ ಹೇಳಿದೆ. ಈ ಕುರಿತು ಪ್ರಕಾಶನ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದೆ. ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವು ಸಿಬಿಎಸ್‌ಇ ಪಠ್ಯವಲ್ಲ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT