ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ–ನಾಗ್ಪುರ ಎಕ್ಸ್‌ಪ್ರೆಸ್‌ಗೆ ₹900 ಕೋಟಿಯಷ್ಟೇ ವೆಚ್ಚ ಎಂಬುದು ತಪ್ಪು ಮಾಹಿತಿ

Published 20 ಮೇ 2024, 1:30 IST
Last Updated 20 ಮೇ 2024, 1:30 IST
ಅಕ್ಷರ ಗಾತ್ರ

ಮುಂಬೈ–ನಾಗ್ಪುರ ಮಧ್ಯೆ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗಿದೆ. ಇದು 700 ಕಿ.ಮೀ ಉದ್ದವಿರುವ ಎಕ್ಸ್‌ಪ್ರೆಸ್‌ವೇ. ಈ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ₹900 ಕೋಟಿ ಖರ್ಚು ಮಾಡಲಾಗಿದೆ ಎಂಬ ವಿವರ ಇರುವ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಪೋಸ್ಟ್‌ಗಳಲ್ಲಿ ಮುಂಬೈ–ನಾಗ್ಪುರ ಎಕ್ಸ್‌ಪ್ರೆಸ್‌ವೇಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗಿರುವ ಮಾಹಿತಿಗಳು ತಪ್ಪು. ಮುಂಬೈ–ನಾಗ್ಪುರ ಎಕ್ಸ್‌ಪ್ರೆಸ್‌ವೇನ ಒಟ್ಟು ಉದ್ದ 701 ಕಿ.ಮೀ. ಈ ಹೆದ್ದಾರಿಯ ಕೆಲವು ಭಾಗಗಳ ಕಾಮಗಾರಿಯಷ್ಟೇ ಪೂರ್ಣಗೊಂಡಿದೆ. ಇನ್ನೂ ಕಾಮಗಾರಿ ನಡೆಯುತ್ತಿದೆ. ಈ ಹೆದ್ದಾರಿಯ ಕಾಮಗಾರಿಯ ಗುತ್ತಿಗೆ ಮೊತ್ತ ಒಟ್ಟು ₹55,000 ಕೋಟಿಯಷ್ಟು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ, ಈ ಹೆದ್ದಾರಿ ನಿರ್ಮಾಣಕ್ಕೆ ₹900 ಕೋಟಿಯಷ್ಟೇ ವೆಚ್ಚವಾಗಿದೆ ಎಂಬುದು ತಪ್ಪು ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT