ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

fact check: ಇದು ಮುಂಬೈ–ನಾಗ್ಪುರ ಹೆದ್ದಾರಿಯೇ

Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮುಂಬೈ–ನಾಗ್ಪುರ ಮಾರ್ಗದ ಸೂಪರ್ ಕಮ್ಯುನಿಕೇಷನ್ ಹೈವೇ ‘ಸಮೃದ್ಧಿ ಮಹಾಮಾರ್ಗ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು. ಹೆದ್ದಾರಿಯ ಅದ್ಭುತ ವಿನ್ಯಾಸವನ್ನು ಬಿಂಬಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹಂಚಿಕೆಯಾಗುತ್ತಿದೆ. ಒಂದು ಕಡೆ, ಹತ್ತಾರು ರಸ್ತೆಗಳು ಹೆದ್ದಾರಿಯನ್ನು ಬಂದು ಸೇರಿ, ಅಲ್ಲೊಂದು ವರ್ತುಲಾಕಾರದ ರಚನೆ ಕಾಣುತ್ತದೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಚಿತ್ರದ ಜೊತೆಗೆ ಹೆದ್ದಾರಿಯ ಈ ಚಿತ್ರವನ್ನು ಕೊಲಾಜ್ ಮಾಡಲಾಗಿದೆ. ಆದರೆ ಈ ಚಿತ್ರ ಥಾಯ್ಲೆಂಡ್ ಹೆದ್ದಾರಿಯದ್ದು.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವ ಚಿತ್ರವು ಬ್ಯಾಂಕಾಕ್‌ನದ್ದು ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ‘ನಾಗ್ಪುರ ಟುಡೇ’ ಪತ್ರಿಕೆಯೂ ಈ ಚಿತ್ರವನ್ನು ತಪ್ಪಾಗಿ ಪ್ರಕಟಿಸಿದೆ. ಈ ಚಿತ್ರವನ್ನು ‘ಮುಂಬೈ ಲೈವ್’ ಜಾಲತಾಣವು 3 ವರ್ಷಗಳ ಹಿಂದೆಯೇ ಪ್ರಕಟಿಸಿತ್ತು. ‘ಷಟರ್‌ಸ್ಟಾಕ್’ ಎಂಬ ಚಿತ್ರಗಳ ಜಾಲತಾಣದಲ್ಲಿ ಈ ಚಿತ್ರ ಬಹಳ ಹಿಂದೆಯೇ ಅಪ್‌ಲೋಡ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT